ಅಪರಿಚಿತ ಬೈಕ್ ಸವಾರ ಮಹಿಳೆಯ ಚಿನ್ನದ ಮಾಂಗ್ಯಲ ಸರ ಕಿತ್ತುಕೊಂಡು ಪರಾರಿ

ಅಪರಿಚಿತ ಬೈಕ್ ಸವಾರ ಮಹಿಳೆಯ ಚಿನ್ನದ ಮಾಂಗ್ಯಲ ಸರ ಕಿತ್ತುಕೊಂಡು ಪರಾರಿ
Published on

ಹಾಸನ : ತಾಲೂಕು ಗೊರೂರು ಗ್ರಾಮದ ನಿವಾಸಿ ಭಾಗ್ಯಮ್ಮ ಭಾನುವಾರ ಸಂಜೆ ಚೇತನ್ ಕಾನ್ವೆಂಟ್ ಸಮೀಪದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬೈಕ್‌ನಲ್ಲಿ ಬಂದ ವ್ಯಕ್ತಿ ಭಾಗ್ಯಮ್ಮ ಅವರ ಕೊರಳಲ್ಲಿದ್ದ 21 ಗ್ರಾಂ ತೂಕದ ಸುಮಾರು 80 ಸಾವಿರ ರೂ. ಬೆಲೆ ಬಾಳುವ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಬೈಕ್‌ನಲ್ಲಿ ಬಂದ ವ್ಯಕ್ತಿ ಮುಖ ಕಾಣದಂತೆ ಹೆಲ್ಮೆಟ್ ಧರಿಸಿದ್ದರಿಂದ ಗುರುತು ಪತ್ತೆ ಆಗಿಲ್ಲ. ಈ ಸಂಬಂಧ ಗೊರೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net