ಅಪರಿಚಿತ ಬುದ್ಧಿಮಾಂದ್ಯ ಬಾಲಕಿ ರಕ್ಷಣೆ

17 NRD-3.
Published on

ನರಗುಂದ: ಅನೇಕ ದಿನಗಳಿಂದ ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಆಶ್ರಯ ಪಡೆದಿದ್ದ ಅಪರಿಚಿತ ಬುದ್ಧಿಮಾಂದ್ಯ ಬಾಲಕಿಯನ್ನು ಪಂಚಮಿ ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿಗಳು ಸೋಮವಾರ ಗದಗ ಬಾಲ ಮಂದಿರಕ್ಕೆ ಒಪ್ಪಿಸಿದರು.

ಪಟ್ಟಣದ ತರಕಾರಿ ಮಾರುಕಟ್ಟೆ, ಗಾಂಧಿ ಸರ್ಕಲ್, ಪುರಸಭೆ ಮತ್ತಿತರ ಪ್ರದೇಶಗಳಲ್ಲಿ ಈಕೆ ತಿರುಗಾಡುತ್ತಿದ್ದಳು. ಈ ಕುರಿತು ಸಾರ್ವಜನಿಕರು ಪಂಚಮಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಕೇಂದ್ರದ ಅಧಿಕಾರಿಗಳಾದ ಭಾರತಿ ಹೊಂಗಲ, ಸಕ್ಕುಬಾಯಿ ಮಾಣಿಕ್, ಶಿವಬಸನಗೌಡ ಅಣ್ಣಿಗೇರಿ, ಭಾರತಿ ಸೂರ್ಯವಂಶಿ ಅವರು ಬಾಲಕಿಯ ಗುರುತು ಪತ್ತೆಗಾಗಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಿಸಿದರು.

ಕನ್ನಡ ಮಾತನಾಡುವ ಈ ಬಾಲಕಿ ತನ್ನ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಈಕೆ ಸಂಪೂರ್ಣ ಬುದ್ಧಿಮಾಂದ್ಯಳಾಗಿದ್ದು, ಗುರುತು ಪತ್ತೆಗೆ ಎಲ್ಲ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಲಾಗುವುದು. ಅಲ್ಲಿಯವರೆಗೆ ಗದಗ ಬಾಲ ಮಂದಿರಕ್ಕೆ ಒಪ್ಪಿಸುವಂತೆ ಸಿಪಿಐ ಡಿ.ಬಿ. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net