ಅಪರಾಧಿಗಳ ಬಂಧನಕ್ಕೆ ಒತ್ತಾಯ

chn aug 23 prathibatane (1)
Published on

ಚನ್ನಗಿರಿ: ಜಾತಿ ನಿಂದನೆ ಪ್ರಕರಣ ದಾಖಲಾಗಿ ಇಪ್ಪತ್ತನಾಲ್ಕು ಗಂಟೆ ಕಳೆದರೂ ಅಪರಾಧಿಗಳನ್ನು ಪೊಲೀಸರು ಬಂಧಿಸದೆ ಹೊರೆಗೆ ಬಿಟ್ಟಿದ್ದಾರೆ. ಅವರಿಂದ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಮೊದಲು ಬಂಧಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಗಂಗಗೊಂಡನಹಳ್ಳಿ ಗ್ರಾಮಸ್ಥರು ಚನ್ನಗಿರಿ ಪೊಲೀಸ್ ಠಾಣೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖಂಡ ರಂಗನಾಥ ಬಸವಾಪುರ ಮಾತನಾಡಿ, ಗಂಗಗೊಂಡನಹಳ್ಳಿ ಗ್ರಾಮದ ವಾಸಿ ನಾಗರಾಜ ಮತ್ತು ಅತನ ಪತ್ನಿ ರೂಪಾ ಎಂಬುವವರು ಗ್ರಾಮದ ಸರ್ವೆ ನಂಬರ್ 10/1ರಲ್ಲಿ 1.8 ಎಕರೆ ಹಾಗೂ 12/4ರಲ್ಲಿ 2.3 ಎಕರೆ ಜಮೀನು ಖರೀದಿ ಮಾಡಿ ಖಾತೆ ಹೊಂದಿದ್ದರು. ಅದೇ ಗ್ರಾಮದ ಇನ್ನೊಂದು ಕೋಮಿನ ಜನರು ಜಮೀನಿಗೆ ಬಂದು ಕೃಷಿ ಮಾಡಲು ಬಿಡುವುದಿಲ್ಲ ಜಮೀನು ಬಿಟ್ಟು ಹೋಗಬೇಕು ಎಂದು ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ್ದಾರೆ. ಈಗಾಗಲೇ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಕ್ರಮ ಜರುಗಿಸದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಮೊದಲು ಆರೋಪಿಗಳನ್ನು ಬಂಧಿಸಿ ಇಲ್ಲದಿದ್ದರೆ ಠಾಣೆಯಲ್ಲಿ ಇರಲು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಡಿಎಸ್‌ಪಿ ಡಾ.ಸಂತೋಷ್ ಮಾತನಾಡಿ, ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ತನಿಖೆ ಪ್ರಾರಂಭಿಸಿದ್ದಾರೆ, ಜಾತಿನಿಂದನೆ ಪ್ರಕರಣ ಆಗಿರುವ ಕಾರಣ ಸತ್ಯಾಸತ್ಯತೆಗಳ ತನಿಖೆ ನಡೆಯುತ್ತದೆ. ಜೀವ ಬೆದರಿಕೆ ಹಾಕಿದ್ದರೆ ದೂರು ನೀಡಿ ರಕ್ಷಣೆ ನೀಡುವಂತ ಕೆಲಸ ಪೊಲೀಸರು ಮಾಡುತ್ತಾರೆ ಎಂದರು.ಪ್ರತಿಭಟನೆಯಲ್ಲಿ ನಾಗರಾಜ್, ಬಸವರಾಜ್, ಆಶ್ವತ್ಥನಾರಯಣ, ಸಚ್ಚಿನ್, ಅಣ್ಣಪ್ಪ, ಶಿವರಾಜ್, ಕುಶ, ಕುಬೇಂದ್ರಸ್ವಾಮಿ, ರಂಗಸ್ವಾಮಿ ಇದ್ದರು.

ದಂಪತಿ ಮೇಲೆ ಹಲ್ಲೆ, ಪ್ರಕರಣ
ಚನ್ನಗಿರಿ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮದ ಒಂದು ಕೋಮಿನ ದಂಪತಿಗೆ ಮತ್ತೊಂದು ಕೋಮಿನ ಜನರು ಹಲ್ಲೆ ನಡೆಸಿ ಜಾತಿನಿಂದನೆ ಮಾಡಿರುವ ಘಟನೆ ತಾಲೂಕಿನ ಗಂಗಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದ್ದು, ಚನ್ನಗಿರಿ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಗ್ರಾಮದ ದಂಪತಿ ನಾಗಮ್ಮ ಹಾಗೂ ನಾಗರಾಜ್ ಹಲ್ಲೆಗೊಳಗಾದವರು. ಅದೇ ಗ್ರಾಮದ ವಿಶ್ವನಾಥ, ಚರಣ್, ಗಿರೀಶ, ಅಶೋಕ, ಶಂಕರಪ್ಪ, ಮೆದುಗೊಂಡನಹಳ್ಳಿ ಗ್ರಾಮದ ಉಮಾಮಹೇಶ್, ಜಮ್ಮಾಪುರ ಗ್ರಾಮದ ಶಿವು ಮುಗಳಿಹಳ್ಳಿ ಗ್ರಾಮದ ಸುಪ್ರಿತ್ ಸೇರಿದಂತೆ ನಲವತ್ತಕ್ಕೂ ಹೆಚ್ಚು ಜನರ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net