

ಚಿತ್ರದುರ್ಗ: ಜಿಲ್ಲೆಯಲ್ಲಿ ಅಪರಾಧ,ಅಪಘಾತ,ಮಾದಕ ವಸ್ತು ಮಾರಾಟ ಹಾಗೂ ಚೀಟಿಂಗ್ ಪ್ರಕರಣಗಳ ನಿಯಂತ್ರಣಕ್ಕೆ ತೀವ್ರ ನಿಗಾ ವಹಿಸ ಬೇ ಕೆಂದು ದಾವಣಗೆರೆ ಪೂರ್ವ ವಲಯ ಐಜಿಪಿ ರಮೇಶ್‌ಬಾನೋತ್ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ನಗರದ ಡಿವೈಎಸ್‌ಪಿ ಕಚೇರಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ಬಳಿಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ,ಜಿಲ್ಲೆಯಲ್ಲಿಯ ಅಪರಾಧ ಹಾಗೂ ಅಪಘಾತ ಪ್ರಕರಣಗಳ ಕುರಿತಂತೆ ಆತಂಕ ವ್ಯಕ್ತಪಡಿಸಿದ್ದಾರೆ. ಕೊಲೆ,ಸುಲಿಗೆ ಇತ್ಯಾದಿ ಅಪರಾಧ ಪ್ರಕರಣಗಳ ಆಗ ದಂತೆ ಕಾನೂನು-ಸುವ್ಯವಸ್ಥೆ ಪಾಲನೆಯಲ್ಲಿ ಕಟ್ಟೆಚ್ಚರ ವಹಿಸ ಬೇಕು. ರಾತ್ರಿ ಗಸ್ತು ಕಡ್ಡಾಯ ಮತ್ತು ಪರಿಣಾಕಾರಿಯಾಗಿರಬೇಕು.
ಕೆಲವು ಠಾಣೆಗಳಲ್ಲಿ ಪಿಎಸ್‌ಐ ಕೊರತೆ ಇರುವುದು ಗಮನದಲ್ಲಿದೆ. ಸರ್ಕಾರ ಪಿಎಸ್‌ಐ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದ್ದು,ಜಿಲ್ಲೆ ಗೂ ಅಗತ್ಯ ಪಿಎಸ್‌ಐಗಳ ನೇಮಕವಾಗಲಿದೆ. ಅಗತ್ಯ ಸೌಲಭ್ಯಗಳನ್ನೂ ಒದಗಿಸುವ ಭರವಸೆ ನೀಡಿದ ಅವರು,ನಾಗರಿಕರಿಗೆ ಉತ್ತಮ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಅಧಿಕಾರಿ,ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ಹಿರಿಯರು,ಮಹಿಳೆಯರ ಸಹಿತ ಠಾಣೆಗಳಿಗೆ ಬರುವಂಥ ನಾಗರಿಕರ ನ್ನು ಸೌಜನ್ಯದಿಂದ ನಡೆಸಿಕೊಳ್ಳ ಬೇಕು.
ಅಪಘಾತ ಪ್ರಕರಣಗಳಿಗೆ ಸಂಬಂಧಿಸಿ ಬ್ಲಾಕ್ ಸ್ಪಾಟ್ ಗುರುತಿಸಿ,ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಸೈನ್ ಬೋರ್ಡ್ ಇತ್ಯಾದಿ ಫಲಕ,ದೀಪಗಳನ್ನು ಅಳವಡಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷೃ ಸಹಿಸಲಾಗದು. ಕಳವು ಇತ್ಯಾದಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಬೇಕು.
ಆರೋಪಿಗಳ ಪತ್ತೆ, ಸ್ವತ್ತು ವಶಕ್ಕೆ ಪಡೆಯುವ ಕೆಲಸವೂ ಚುರುಕಾಗ ಬೇಕು. ಹಣ ದ್ವಿಗುಣದಂಥ ವಂಚನೆ ಪ್ರಕರಣಗಳ ವಿರುದ್ಧ ಕಠಿ ಣ ಕ್ರಮ ಜರುಗಿಸಬೇಕು, ಯಾವುದೇ ಕಾರಣಕ್ಕೂ ಪೊಲೀಸರು ರಾಜೀಪಂಚಾಯಿತಿಗಳಿಗೆ ಮುಂದಾಗದೆ ಕಾನೂನು ರೀತ್ಯಾ ಕ್ರಮ ವಹಿ ಸ ಬೇಕೆಂದರು. ವಾಹನಗಳ ವೇಗ,ಮಾದಕ ವಸ್ತುಗಳ ಮಾರಾಟಕ್ಕೂ ಕಡಿವಾಣ ಹಾಕುವಂತೆ ಐಜಿಪಿ ಅಧಿಕಾ ರಿಗಳಿಗೆ ಸೂಚಿಸಿದರೆಂದು ಮೂಲಗಳು ತಿಳಿಸಿವೆ.
ಎಸ್‌ಪಿ ರಂಜಿತ್‌ಕುಮಾರ್ ಬಂಡಾರು,ಡಿವೈಎಸ್‌ಪಿ ಪಿ.ಕೆ.ದಿನಕರ್,ನಯೀಂಅಹಮದ್,ತಿಪ್ಪೇಸ್ವಾಮಿ,ಗೋಪಾಲನಾಯಕ್,ದೊ ಡ್ಡಣ್ಣ,ಎಂ.ಬಿ.ಚಿಕ್ಕಣ್ಣವರ್,ಬಿ.ಕೆ.ಲತಾ,ಮುದ್ದುರಾಜ್ ಸೇರಿದಂತೆ ವಿವಿಧ ಠಾಣೆಗಳ ಇನ್ಸ್‌ಪೆಕ್ಟರ್‌ಗಳು,ಪಿಐಎಸ್‌ಗಳಿದ್ದರು.
---