ಅಪರಾಧ ಕೃತ್ಯಗಳ ವಿರುದ್ಧ ತಕ್ಷಣ ದೂರು ನೀಡಿ

CTD 5 NEWS CRIME-02
Published on


ಚಿತ್ರದುರ್ಗ: ಕಳ್ಳತನ,ದರೋಡೆ ಮೊದಲಾದ ಅಪರಾಧ ಕೃತ್ಯಗಳಾದಂಥ ವೇಳೆಯಲ್ಲಿ ತಕ್ಷಣವೇ ಪೊಲೀಸರಿಗೆ ದೂರು ನೀಡ ಬೇಕು, ಈ ನಿಟ್ಟಿನಲ್ಲಿ ವಿಳಂಬ ಸಲ್ಲದೆಂದು ಎಸ್.ಪಿ.ಧರ್ಮೆಂದರ್‌ಕುಮಾರ್ ಮೀನಾ ಹೇಳಿದರು.
ನಗರದ ಡಿಎಆರ್ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ, ಜಿಲ್ಲೆಯಲ್ಲಿ 2023ನೇ ಸಾಲಿನಲ್ಲಿ ವಿವಿಧ ಕಳವು, ದರೋಡೆ, ಸುಲಿಗೆ ಮೊ ದಲಾದ 68ಅಪರಾಧ ಪ್ರಕರಣಗಳಡಿ ಪೊಲೀಸರು ವಶಪಡಿಸಿಕೊಂಡಿದ್ದ 1.63 ಕೋಟಿ ರೂ.ಅಧಿಕ ಮೌಲ್ಯದ ಚಿನ್ನಾಭರಣ,ಬೆಳ್ಳಿ,ನಗ ದು, ವಾಹನ ಮತ್ತಿತರ ವಸ್ತುಗಳನ್ನು ವಾರಸುರಾದರರಿಗೆ ಹಸ್ತಾಂತರಿಸುವ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು,ಹಿಂದೆ ಕೂಡ ಸಮಾಜ ದಲ್ಲಿ ದುಷ್ಕೃತ್ಯಗಳು ನಡೆಯುತ್ತಿದ್ದವು, ಈಗಲೂ ನಡೆಯುತ್ತಿವೆ, ಮುಂದೆ ಕೂಡ ಅಪರಾಧ ಕೃತ್ಯಗಳು ನಡೆಯಲಿದ್ದು,ಇವುಗಳ ಹತೋಟಿ ಗೆಂದೇ ಪೊಲೀಸರು ಇರುವುದು.
ಕಳ್ಳತನ ಮೊದಲಾದ ಕೃತ್ಯಗಳಾದಂಥ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಿದರೆ, ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಸೂಕ್ತ ಸಾಕ್ಷಾೃಧಾರಗಳನ್ನು ಸಂಗ್ರಹಿಸಿ, ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಲಿದೆ. ದೂರು ನೀಡುವುದು ವಿಳಂಬವಾದಷ್ಟು ಕೃತ್ಯಗಳನ್ನು ಸರ ಳವಾಗಿ ಭೇದಿಸಲಾಗದು.
ದೇಶದಲ್ಲಿ ಬ್ರಿಟಿಷರ ಆಡಳಿತವಿದ್ದಾಗ ಅಂದಿನ ಪೊಲೀಸರು 1860ರಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಮೊದಲ ಎಫ್‌ಐಆರ್‌ನ್ನು ಹೊಸ ದಿಲ್ಲಿಯಲ್ಲಿ ದಾಖಲಿಸಿದ್ದರು ಎಂದು ಪೊಲೀಸ್ ವ್ಯವಸ್ಥೆಯನ್ನು ವಿವರಿಸಿದರು.
ತಮ್ಮ ಸ್ವತ್ತುಗಳನ್ನು ಮರಳಿ ವಾಪಾಸು ಪಡೆದ ವಾರಸುದಾರರು, ಪೊಲೀಸ್ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. 1.57 ಕೋಟಿ ರೂ. ಮೌಲ್ಯದ ಚಿನ್ನಾಭರಣ,ನಗದು ಇತ್ಯಾದಿ ಹಾಗೂ ಸಿಇಎನ್ ಪೊಲೀಸರು ಸಿಇಐಆರ್ ಫೋರ್ಟಲ್ ಅಡಿ ಪತ್ತೆ ಮಾಡಿರುವ 6.24 ಲಕ್ಷ ರೂ.ಮೌಲ್ಯದ 52 ಮೊಬೈಲ್‌ಗಳನ್ನು ವಾರಸುದಾರರಿಗೆ ವಿತರಿಸಲಾಯಿತು.
ಚಿತ್ರದುರ್ಗ ಪೊಲೀಸ್ ಉಪವಿಭಾಗ ವ್ಯಾಪ್ತಿಯ 22 ಪ್ರಕರಣಗಳಡಿ 1.08 ಕೋಟಿ ರೂ., ಹಿರಿಯೂರು 16 ಪ್ರಕರಣಗಳಡಿ 24.95 ಲಕ್ಷ ರೂ.ಹಾಗೂ ಚಳ್ಳಕೆರೆ ಪೊಲೀಸ್ ಉಪವಿಭಾಗ ವ್ಯಾಪ್ತಿ 30 ಪ್ರಕರಣಗಳಿಗೆ ಸಂಬಂಧಿಸಿದಂತೆ 24. 14 ಲಕ್ಷ ರೂ.ಮೌಲ್ಯದ ವಸ್ತುಗಳ ನ್ನು ವಾರಸುದಾರರಿಗೆ ಹಿಂತಿರುಗಿಸಲಾಯಿತು.
ಎಎಸ್‌ಪಿಗಳಾದ ಎಸ್.ಜೆ.ಕುಮಾರಸ್ವಾಮಿ,ಅಬ್ದುಲ್‌ಖಾದರ್, ಡಿವೈಎಸ್‌ಪಿಗಳಾದ ಎಚ್.ಆರ್.ಅನಿಲ್‌ಕುಮಾರ್,ಎಸ್.ಚೈತ್ರಾ,ರಾ ಜಣ್ಣ, ಡಿಎಆರ್ ಡಿವೈಎಸ್‌ಪಿ ಗಣೇಶ್ ಮತ್ತಿತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net