ಅಪಜಲಪುರದಲ್ಲಿ ಭರ್ಜರಿ ವಿಜಯೋತ್ಸವ

klb3
Published on

ಅಫಜಲಪುರ: ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಹುದ್ದೆಗೆ ಸೋಮವಾರ ಶಾಂತಿಯುತ ಮತದಾನ ನಡೆದಿದೆ. ಒಟ್ಟು 34ರಲ್ಲಿ 21 ಹುದ್ದೆಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಇನ್ನುಳಿದ 13 ಸ್ಥಾನಗಳಿಗೆ ಭಾರಿ ಪೈಪೋಟಿ ಎದುರಾಗಿತ್ತು.

13 ಸ್ಥಾನಗಳಿಗೆ ಬರೋಬ್ಬರಿ 26 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸೋಮವಾರ ಬೆಳಗ್ಗೆಯಿಂದ ಸರ್ಕಾರಿ ನೌಕರರ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಸಂಜೆ ಮತ ಎಣಿಕೆ ಕಾರ್ಯ ನಡೆಯಿತು. ಮ¯್ಲೆÃಶಪ್ಪ ಬಿಂಜಗೇರಿ, ಸಂಜೀವಕುಮಾರ ಬಗಲಿ, ಅಬ್ದುಲï ಸತ್ತಾರ್ (ಪ್ರಾಥಮಿಕ ಶಾಲೆ), ರೇಣುಕಾ ಸುತಾರ್ (ಕ್ಷೇತ್ರ ಶಿP್ಷÀಣಾಧಿಕಾರಿ), ಭೀಮಾಶಂಕರ ಬಿರಾದಾರ (ಸಮಾಜ ಕಲ್ಯಾಣ), ಭಾಗಪ್ಪ ತಳವಾರ, ಸುಧೀರ್ ಕೆ. (ನ್ಯಾಯಾಂಗ), ಪ್ರವೀಣ್ ದೇಸಾಯಿ, ಸಂಜೀವಕುಮಾರ, ಶರಣಮ್ಮ, ಸಂತೋಷಕುಮಾರ ಪಾಟೀಲï (ಆರೋಗ್ಯ), ಅಬ್ದುಲï ರೆಹಮಾನ್, ಮಹಾಂತೇಶ ಸಾಲಿಮಠ (ತಾಲೂಕಾ ಪಂಚಾಯಿತಿ) ಗೆಲುವು ಸಾಧಿಸಿದ್ದಾರೆ.

ಅವಿರೋಧ ಆಯ್ಕೆ: ಬಸವರಾಜ ಕಲ್ಲೂರ (ಉಪ ಖಜಾನೆ), ಶರಣಬಸಪ್ಪ ಅವಟೆ (ಪದವಿ ಕಾಲೇಜು), ಶಿವಕುಮಾರ ಹಳಿಮನಿ (ಕೃಷಿ), ಶರಣಬಸಪ್ಪ ನಂದಿ (ಪಶುಪಾಲನಾ), ಗುರಣ್ಣ ಹಂಡಿ, ಸಿದ್ದಪ್ಪ ಹುದಲೂರ (ಕಂದಾಯ), ಉಮೇಶ ಆಲೆಗಾಂವ್ (ಲೋಕೋಪಯೋಗಿ), ಕಿರಣಕುಮಾರ ಪವಾರ್ (ಸಣ್ಣ ನೀರಾವರಿ), ರಾಜಶೇಖರ ಮನ್ಮಿ (ಪಂಚಾಯತ್‌ರಾಜ್), ಗಿರೀಶ ಕಡ್ಲೇವಾಡ (ಪ್ರೌಢ ಶಾಲೆ), ಪ್ರಶಾಂತ ಬಿಂದಗೆ (ಪದವಿಪೂರ್ವ ಕಾಲೇಜು), ವಿಜಯಕುಮಾರ ಕುದರಿ (ಹಿಂದುಳಿದ ವರ್ಗ), ಸಂಜೀವಕುಮಾರ ಪಾಟೀಲï (ಅಲ್ಪಸಂಖ್ಯಾತ ಕಲ್ಯಾಣ), ಅಮೋಘಸಿದ್ದ ಪ್ಯಾಟಿ (ಸಾಮಾಜಿಕ ಅರಣ್ಯ), ರಾಜಶೇಖರ ಕ¯್ಲÉÆಳ್ಳಿ, ಸಖಲೇಶ ಪಾಟೀಲï (ತೋಟಗಾರಿಕೆ, ರೇಷ್ಮೆ), ಸಿದ್ದಿಕ್ ಅಹ್ಮದ್ (ಭೂ ಮಾಪನ), ಶಾರದಾ ಅವಟೆ, ಶಿವಲೀಲಾ ಡೆಂಗಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ), ಬಾಬುರಾವ ಪಾಟೀಲ್ (ಕೆಎನ್‌ಎನ್‌ಎಲ್), ಮಲ್ಲಿಕಾರ್ಜುನ (ಪಾಲಿಟೆಕ್ನಿಕ್).

ರಾಜಕುಮಾರ ಗೌರ ಚುನಾವಣಾಧಿಕಾರಿಯಾಗಿ, ಆನಂದ ಕುಂಬಾರ, ಹಣಮಂತ ಕೋರವಾರ, ಮಶಾಖ್ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net