ಅಪಘಾತದಲ್ಲಿ ಸವಾರ ಸಾವು

images
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಖೋತನಹಟ್ಟಿ ಕ್ರಾಸ್​ ಬಳಿಯ ಸಂಕೇಶ್ವರ ಜೇವರ್ಗಿ ರಾಷ್ಟ್ರಿಯ ಹೆದ್ದಾರಿಯಲ್ಲಿ ಎರಡು ಬೈಕ್​ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸವಾರ ಮೃತಪಟ್ಟು ಇನ್ನೋರ್ವ ಸವಾರನಿಗೆ ಗಂಭೀರ ಗಾಯವಾದ ಟನೆ ಈಚೆಗೆ ನಡೆದಿದೆ. ಅಥಣಿ ಪಟ್ಟಣದ ದತ್ತಾತ್ರೆಯ ಮುದ್ದೇಬಿಹಾಳ (30) ಮೃತ ಸವಾರ. ಚಿಕ್ಕೋಡಿಯ ವಿಜಯಕುಮಾರ ಬಸಣ್ಣವರ (50) ಗಾಯಗೊಂಡವ. ದತ್ತಾತ್ರೆಯ ಚಿಕಿತ್ಸೆ ಫಲಸದೆ ಭಾನುವಾರ ಮೃತಪಟ್ಟಿದ್ದಾನೆ. ಈ ಕುರಿತು ಐಗಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net