ಅಪಘಾತದಲ್ಲಿ ಯುವತಿ ಸಾವು

Published on
ಕುಣಿಗಲ್​: ಪಟ್ಟಣದ ತುಮಕೂರು ರಸ್ತೆಯ ಶನಿಮಹಾತ್ಮ ದೇವಾಲಯದ ಮುಂಭಾಗ ಸೋಮವಾರ ಸಂಜೆ ಟ್ರ್ಯಾಕ್ಟರ್​ ಹಾಗೂ ಬೈಕ್​ ನಡುವೆ ಅಪಘಾತ ಸಂಭವಿಸಿದ್ದು, ಅವಡದಲ್ಲಿ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬಾಗೇನಳ್ಳಿಯ ಹಿಂದೂಶ್ರೀ (16) ಮೃತೆ. ಕುಣಿಗಲ್​ ಪಟ್ಟಣದ ಸ್ಟೇಲ್ಲಾಮೇರಿಸ್​ ಶಾಲೆಯಲ್ಲಿ ಎಸ್​ಎಸ್​ಎಲ್​ಸಿ ವ್ಯಾಸಂಗ ಮಾಡುತ್ತಿದ್ದ ಹಿಂದೂಶ್ರೀ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾಗಿ ನಂತರ ಗ್ರಾಮಕ್ಕೆ ಬೈಕ್​ನಲ್ಲಿ ತೆರಳುವ ವೇಳೆ ಹಿಂಬದಿಯಿಂದ ಬಂದ ಟ್ರ್ಯಾಕ್ಟರ್​ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಯುವತಿಯ ತಲೆ ಮೇಲೆ ಟ್ರ್ಯಾಕ್ಟರ್​ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕುಣಿಗಲ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿಯನ್ನು ಕೊಂದವನಿಗೆ ಜೀವಾವಧಿ ಶಿಕ್ಷೆ

ತುಮಕೂರು: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಕೊಲೆಗೈದ್ದಿದ್ದವನಿಗೆ ನಗರದ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡದ ಕಠಿಣ ಶಿೆ ವಿಧಿಸಿದೆ. ಲೋಹಿತ ಶಿೆಗೆ ಗುರಿಯಾದವ. ಈತ 2019ರಲ್ಲಿ ಪತ್ನಿ ಅರ್ಪಿತಾ ಜತೆಗೆ ಬೆಂಗಳೂರಿನಿಂದ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಕುಣಿಗಲ್​ ತಾಲೂಕು ಸಂತೆಮಾವತ್ತೂರು&ಅಮೃತೂರು ಸಮೀಪ ಬೈಕ್​ನಿಂದ ಬೀಳಿಸಿ ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದ. ಕುಣಿಗಲ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ವಿ.ಎ.ಕವಿತಾ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net