ಪಾವಗಡ:- ತುಮಕೂರು ರಸ್ತೆಯಿಂದ ಪಾವಗಡದ ಕಡೆಗೆ ತೆರಳುತ್ತಿದ್ದ ಬುಲೆರೋ ಜೀಪು ಮುಂಭಾಗದಲ್ಲಿ ಹೋಗುತ್ತಿದ್ದ ಲಾರಿಗೆ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಬುಲೆರೋ ಚಾಲಕ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಗಿರೀಶ್( 21) ಮೃತ. ಮಂಗಳವಾರ ಬೆಳಗ್ಗೆ ಲಾರಿ ಮುಂಭಾಗದಲ್ಲಿ ಚಲಿಸುತ್ತಿದ್ದ ಓಮ್ನಿ ಕಾರು ದಿಢೀರ್ ಯೂರ್ಟನ್ ತೆಗೆದುಕೊಂಡಿದ್ದರಿಂದ ವೇಗವಾಗಿ ಹೋಗುತ್ತಿದ್ದ ಲಾರಿ ಚಾಲಕ ನಿಧಾನಿಸಿದ್ದರಿಂದ ಹಿಂಬದಿಯಲ್ಲಿ ವೇಗವಾಗಿ ಬರುತ್ತಿದ್ದ ಬುಲೇರೊ ನಿಯಂತ್ರಣಕ್ಕೆ ಸಿಗದೆ ಅಪಘಾತವಾಗಿದೆ. ಪಾವಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.