ಅಪಘಾತದಲ್ಲಿ ಮೂವರು ಸಾವು

03
Published on

ಶಿರಾ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್​ ಪಲ್ಟಿಯಾಗಿ ಮೂವರು ಮಹಿಳೆಯರು ಮೃತಪಟ್ಟು, 20 ಜನರು ಗಾಯಗೊಂಡಿರುವ ಟನೆ ಸೋಮವಾರ ಬೆಳಗಿನಜಾವ ಚಿಕ್ಕನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಉತ್ತರ ಪ್ರದೇಶದ ಲಕ್ನೋ ಮೂಲದ ಊರ್ವಿ ನಯನಾ (28), ಪಶ್ಚಿಮ ಬಂಗಾಳದ ಕೋಲ್ಕತ್ತಾದ ಪ್ರಿಯಾಂಕಾ ಮಂಡಲ್​ (26), ಬೆಂಗಳೂರಿನ ಶುಭಾಲಿ ಸಿಂಗ್​(26) ಮೃತ ದುರ್ದೈವಿಗಳು. ಊರ್ವಿ ಹಾಗೂ ಪ್ರಿಯಾಂಕ್​ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ್ಯಾಷನ್​ ಡಿಸೈರ್​ಗಳಾಗಿದ್ದು, ಶುಭಾಲಿ ಗೃಹಿಣಿ. ಮೂವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಗೋವಾದಿಂದ ಬೆಂಗಳೂರು ಮಾರ್ಗವಾಗಿ ತೆರಳುತ್ತಿದ್ದ ಖಾಸಗಿ ಬಸ್​ ಚಿಕ್ಕನಹಳ್ಳಿ ಬಳಿ ನಿಮಾರ್ಣವಾಗಿರುವ ನೂತನ ಸೇತುವೆ ಮೇಲೆ ಬೆಳಗಿನ ಜಾವ 4.45ರಲ್ಲಿ ಹೆದ್ದಾರಿಯ ಡಿವೈಡರ್​ಗೆ ಹೊಡೆದು ಪಲ್ಟಿಯಾಗಿದೆ. ಬಸ್​ನಲ್ಲಿದ್ದ 29 ಪ್ರಯಾಣಿಕರ ಪೈಕಿ ಮೂವರು ಅಸುನೀಗಿದ್ದು, 20 ಜನಕ್ಕೆ ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಶಿರಾ ತಾಲೂಕು ಹಾಗೂ ತುಮಕೂರು ಜಿಲ್ಲಾ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್​ ಚಾಲಕ ನಿದ್ರೆ ಮಂಪರಿನಲ್ಲಿ ಡಿವೈಡರ್​ ಹತ್ತಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಎಸ್ಪಿ ದೌಡು: ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಕೆ.ವಿ.ಅಶೋಕ್​ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಮಾರ್ಗದರ್ಶನ ನೀಡಿದರು. ಕಳ್ಳಂಬೆಳ್ಳ ಪೊಲೀಸ್​ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಲೆಕ್ಟ್ರಿಕ್​ ಶೋರೂಂಗೆ ಬೆಂಕಿಬಿದ್ದು 2 ಬೈಕ್​ ಭಸ್ಮ

ತುರುವೇಕೆರೆ ಪಟ್ಟಣದ ತಿಪಟೂರು ರಸ್ತೆಯಲ್ಲಿನ ಜೆಮೊಪೈ ಎಲೆಕ್ಟ್ರಿಕ್​ ದ್ವಿಚಕ್ರವಾಹನ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡು ಎರಡು ಬೈಕ್​ಗಳು ಭಸ್ಮವಾಗಿವೆ. ತಾಲೂಕಿನ ಅರಳೀಕೆರೆ ಗ್ರಾಮದ ಮೋಹನ್​ ಮಾಲೀಕತ್ವದ ಶೋರೂಂನಲ್ಲಿ ಸೋಮವಾರ ರಾತ್ರಿ ವಿದ್ಯುತ್​ ಶಾರ್ಟ್​ ಸಕ್ಯೂರ್ಟ್​ನಿಂದ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಅಕ್ಕಪಕ್ಕದ ಅಂಗಡಿಯವರು ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿ ಶಾಮಕ ಠಾಣಾ ಸಿಬ್ಬಂದಿ ಶಟರ್​ ತೆರೆದು ಬೆಂಕಿ ನಂದಿಸಿದ್ದಾರೆ. ಅಷ್ಟರೊಳಗೆ ಮಳಿಗೆಯಲ್ಲಿದ್ದ 18 ದ್ವಿಚಕ್ರ ವಾಹನಗಳ ಪೈಕಿ ಎರಡು ಬೈಕ್​ ಸಂಪೂರ್ಣ ಸುಟ್ಟು ಕರಕಲಾಗಿವೆ. ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ಠಾಣಾ

ಸಿಬ್ಬಂದಿ ನವೀನ್​ ಕುಮಾರ್​, ಶಿವಕುಮಾರ್​, ರಾಹುಲ್​, ಸುನೀಲ್​ ಹಿರೇಮಠ್​, ತೌಸ್​ಿ ಭಾಗವಾನ್​ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net