ಅಪಘಾತದಲ್ಲಿ ಮೂವರು ಸಾವು

16-jvg
Published on


ವಿಜಯವಾಣಿ ಸುದ್ದಿಜಾಲ ಜೇವರ್ಗಿ
ತಾಲೂಕಿನ ಮುದವಾಳ (ಕೆ) ಕ್ರಾಸ್ ಬಳಿಯ ಸ್ವಾಗತ ಕಮಾನ್ಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಮೃತಪಟ್ಟು , ಒಬ್ಬನಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ.
ರಮೇಶ ಹಣಮಂತರಾವ (40), ಅನಿತಾ ಸಂತೋಷಕುಮಾರ ರಾಜಲಬಂಡಾ (42), ಹೇಮಂತ ಸಂತೋಷಕುಮಾರ (18) ಮೃತ ದುರ್ದೈವಿಗಳು.
ಸುರಪುರದಿಂದ ಕಲಬುರಗಿಗೆ ಕಾರಿನಲ್ಲಿ ಬರುತ್ತಿದ್ದಾಗ ಮುದವಾಳ (ಕೆ) ಕ್ರಾಸ್ ಬಳಿಯ ನಿಯಂತ್ರಣ ತಪ್ಪಿ ಸ್ವಾಗತ ಕಮಾನ್ಗೆ ಕಾರು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಸಂತೋಷಕುಮಾರ ರಾಜಲಬಂಡಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರಪುರ ತಾಲೂಕಿನ ಪೇಟ್ಅಮ್ಮಾಪುರ ಗ್ರಾಮದ ಸಗರನಾಡು ಅನುದಾನಿತ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಮೃತರು ಹಾಗೂ ಗಾಯಾಳುಗಳು ಸುರಪುರ ಪಟ್ಟಣದ ಜಲಾಲ ಮೋಹಲಾ ನಿವಾಸಿಗಳೆಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಕಲಬುರಗಿ ಗ್ರಾಮೀಣ ಉಪ ವಿಭಾಗದ ಡಿವೈಎಸ್ಪಿ. ತಾಯಪ್ಪ ದೊಡ್ಡಮನಿ, ಜೇವರ್ಗಿ ಸಿಪಿಐ ರಮೇಶ ರೊಟ್ಟಿ, ಕಲಬುರಗಿ ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ಸಿದ್ಧರಾಮೇಶ ಗಡೇದ್, ಜೇವರ್ಗಿ ಠಾಣೆ ಪಿಎಸ್ಐ ಸಂಗಮೇಶ ಅಂಗಡಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ. ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net