ಅಪಘಾತದಲ್ಲಿ ಮೂವರ ಸಾವು

Published on

ಹೊಸದುರ್ಗ: ತಾಲೂಕಿನ ಹೊನ್ನೆನಹಳ್ಳಿ ಬಳಿ ಸೋಮವಾರ ಸಂಭವಿಸಿದ ಅಪಘಾತದಲ್ಲಿ ದೇವರ ದರ್ಶನಕ್ಕೆ ಬಂದಿದ್ದ ಇಬ್ಬರು ಮಕ್ಕಳು ಸೇರಿ ಮೂವರು ಸಾವಿಗೀಡಾಗಿರುವ ಹೃದಯ ವಿದ್ರಾವಕ ಟನೆ ನಡೆದಿದೆ.

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ಉಮೇಶ್​(55), ಭವ್ಯಶ್ರೀ (12), ಮನ್ವಿತ (9) ಮೃತ ದುರ್ದೈವಿಗಳು. 50 ವರ್ಷ ವಯಸ್ಸಿನ ಈರಮ್ಮ ತೀವ್ರವಾಗಿ ಗಾಯಗೊಂಡಿದ್ದಾರೆ.

ಹಾಲುರಾಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಮುಗಿಸಿಕೊಂಡು ಮಾರುತಿ ಅಲ್ಟೋ ಕಾರಿನಲ್ಲಿ ಊರಿಗೆ ಹಿಂತಿರುಗುತ್ತಿದ್ದಾಗ ಹೊನ್ನೆನಹಳ್ಳಿ ಬಳಿ ಎದುರಿಗೆ ಬರುತ್ತಿದ್ದ ಬೋಲೆರೋ ಪಿಕ್​ ಅಪ್​ ವಾಹನಕ್ಕೆ ಡಿಕ್ಕಿಯಾಗಿದೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರು ಚಲಾಯಿಸುತ್ತಿದ್ದ ಉಮೇಶ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಭವ್ಯಶ್ರೀ, ಮನ್ವಿತ್​ ಹೊಸದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈರಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸದುರ್ಗ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಲ್ಲಿ ಮೃತಪಟ್ಟವರು ಪಟ್ಟನಾಯಕನಹಳ್ಳಿಯ ಅಕ್ಕಪಕ್ಕದ ಮನೆಯ ನಿವಾಸಿಗಳು. ಕಾರಿನ ಮಾಲೀಕ ಮಂಜುನಾಥ್​ ಪಕ್ಕದ ಮನೆಯ ಉಮೇಶನಿಗೆ ತನ್ನ ಕಾರು ಕೊಟ್ಟು ಹೊಸದುರ್ಗ ತಾಲೂಕಿನ ಹಾಲುರಾಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲು ತನ್ನ ಎರಡು ಮಕ್ಕಳನ್ನು ಕಳುಹಿಸಿದ್ದರು. ಇವರ ಜತೆಗೆ ಪಕ್ಕದ ಮನೆಯ ಈರಮ್ಮ ಕೂಡ ಬಂದಿದ್ದರು. ದೇವಾಲಯದಲ್ಲಿ ಪೂಜೆ ಮುಗಿಸಿ ವಾಪಸಾಗುವಾಗ ಮಾರ್ಗ ಮಧ್ಯೆ ದುರಂತ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net