ಅಪಘಾತದಲ್ಲಿ ಮಗಳು ಸಾವು, ತಾಯಿಗೆ ಗಾಯ

accident
Published on

ಮೈಸೂರು: ನಗರದ ದಾಸಪ್ಪ ವತ್ತದ ಬಳಿ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಮೊಪೆಡ್‌ನಲ್ಲಿ ತೆರಳುತ್ತಿದ್ದ ನಗರದ ಮಂಜುನಾಥಪುರ ನಿವಾಸಿ ಮಹಾದೇವಿ (30) ಮತಪಟ್ಟಿದ್ದು, ಅವರ ತಾಯಿ ಮಂಗಳಮ್ಮ(50) ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಾಯಿ, ಮಗಳು ಸೊಪ್ಪಿನ ವ್ಯಾಪಾರ ವಾಡುತ್ತಿದ್ದು, ಎಂದಿನಂತೆ ಶುಕ್ರವಾರ ಬೆಳಗ್ಗೆ 3ರ ಸುವಾರಿಗೆ ತಮ್ಮ ಮೊಪೆಡ್‌ನಲ್ಲಿ ಸೊಪ್ಪು ತರಲು ಗನ್‌ಹೌಸ್ ವಾರುಕಟ್ಟೆಗೆ ತೆರಳಿದ್ದರು.

ಮನೆಗೆ ಹಿಂತಿರುಗುತ್ತಿದ್ದ ವೇಳೆ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಸಾರ್ವಜನಿಕರು ಕೂಡಲೇ ಅವರನ್ನು ಕೆ.ಆರ್.ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ದೇವರಾಜ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net