ಅಪಘಾತದಲ್ಲಿ ಬೈಕ್ ಸವಾರ ಸಾವು

bkt-10-4
ಭರತಭೂಷನ್ ವಿಜಯಕುಮಾರ ತೋಸ್ನಿವಾಲ
Published on

ಬಾಗಲಕೋಟೆ: ಅಂಗಡಿಗೆ ತೆರಳುತ್ತಿದ್ದ ವೇಳೆ ಹಿಂಬದಿಯಿ0ದ ಬಂದ ಟಿಪ್ಪರ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿ ಬೈಕ್ ಸವಾರನೋರ್ವ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಸೋಮವಾರ ನಗರದಲ್ಲಿ ನಡೆದಿದೆ.

ಭರತಭೂಷನ್ ವಿಜಯಕುಮಾರ ತೋಸ್ನಿವಾಲ (೩೩) ಮೃತ ದುರ್ದೈವಿ.  ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣ ಕಡೆ ಹೊರಟಿದ್ದ ಬೈಕ್ ಸವಾರ ಟಿಪ್ಪರ ಏಕಾಏಕಿಯಾಗಿ ಬಂದು ಗುದ್ದಿದೆ. ಇದರಿಂದ ೧೫, ೨೦ ಅಡಿಗಳನ್ನು ಎಳೆದೊಯ್ದು ನಿಂತಿದೆ. ಘಟನೆಯಲ್ಲಿ ಬೈಕ್ ಸವಾರಿಗೆ ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಾಗಲಕೋಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net