ಅಪಘಾತದಲ್ಲಿ ಬೈಕ್ ಸವಾರ ಸಾವು

27tnpnews02mahesh.pp
Published on


ತಿ.ನರಸೀಪುರ: ತಾಲೂಕಿನ ಕುರುಬೂರು ಸಮೀಪದ ಪಿಂಜರಾಪೋಲ್ ಬಳಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಮೂಲತಃ ತೇರಂಬಳ್ಳಿಯವರಾದ, ಕುರುಬೂರು ಗ್ರಾಮದ ನಿವಾಸಿ ಟಿ.ಆರ್. ಮಹೇಶ್ ಕುಮಾರ್ (33) ಮೃತರು. ಹಿಂಬದಿ ಕುಳಿತಿದ್ದ ವೀರಭದ್ರಸ್ವಾಮಿ ಗಾಯಗೊಂಡವರು.
ಶುಕ್ರವಾರ ಸಂಜೆ ಟ್ರಾೃಕ್ಟರ್‌ಗೆ ಡೀಸೆಲ್ ತರಲು ತಿ.ನರಸೀಪುರಕ್ಕೆ ಹೋಗಿ ವಾಪಸಾಗುತ್ತಿದ್ದ ವೇಳೆ ಮಳೆ ಬೀಳುತ್ತಿದ್ದ ಕಾರಣ ಎದುರಿಗೆ ಬಂದ ವಾಹನದ ಲೈಟ್ ಬೆಳಕಿಗೆ ರಸ್ತೆ ಕಾಣದೆ ಬೈಕ್ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮಹೇಶ್‌ಕುಮಾರ್ ಸ್ಥಳದಲ್ಲೇ ಮೃತಪಟ್ಟರು. ಗಾಯಗೊಂಡ ವೀರಭದ್ರಸ್ವಾಮಿಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net