ಅಪಘಾತದಲ್ಲಿ ಬೈಕ್​ ಸವಾರ ಸಾವು

Published on

ತಿಪಟೂರು: ತಾಲೂಕಿನ ಕರಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್​ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಶೆಟ್ಟಿಕೆರೆಯ ಅವಿನಾಶ್​(30)ಮೃತ. ಬೆಂಗಳೂರು ಕೆಡೆಗೆ ಹೋಗುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಚಾಲಕನ ನಿಯಂತ್ರಣ ತಪ್ಪಿ ಬೈಕ್​ ಸವಾರನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್​ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಬಂದ್​: ಅಪಘಾತ ಸಂಭವಿಸಿದ ಕರಡಿ ಕೆರೆ ಕೋಡಿ ವೃತ್ತದಲ್ಲಿ ಶೆಟ್ಟಿಹಳ್ಳಿ, ಕೆ.ಬಿ.ಕ್ರಾಸ್​ ಮತ್ತು ತಿಪಟೂರು ಕಡೆಗೆ ಹೋಗುವ ವೃತ್ತವನ್ನು ವೈಜ್ಞಾನಿಕವಾಗಿ ನಿರ್ಮಿಸಿರುವುದೇ ಅಪಘಾತಕ್ಕೆ ಕಾರಣವೆಂದು ಆರೋಪಿಸಿ ಸ್ಥಳಿಯರು ಬೆಳಗ್ಗೆ 9&30ರಿಂದ ಮಧ್ಯಾಹ್ನ 1&15ರ ವರೆಗೂ ರಾಷ್ಟ್ರಿಯ ಹೆದ್ದಾರಿ ಬಂದ್​ ಮಾಡಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಡೆಸಿದರು. ಶಾಸಕ ಕೆ.ಷಡಕ್ಷರಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಪರಿಣಾಮ ಜಿಲ್ಲಾ ಹೆಚ್ಚುವರಿ ಪೊಲಿಸ್​ ವರಿಷ್ಠಾಧಿಕಾರಿ ಅಬ್ದುಲ್​ಖಾದರ್​ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಕೆಎಸ್​ಆರ್​ಟಿಸಿ ಜಿಲ್ಲಾ ಅಧಿಕಾರಿ ತಕ್ಷಣದ ಪರಿಹಾರವಾಗಿ 50 ಸಾವಿರ ನೆರವು ೂಷಿಸಿ, ಇಲಾಖೆಯಿಂದ ಸಿಗಬಹುದಾದ ಇನ್ನಿತರ ಪರಿಹಾರ ಕೊಡಿಸುವ ಭರವಸೆ ನೀಡಿದ ನಂತರ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಹಳೇ ವೈಷಮ್ಯಕ್ಕೆ ಹಲ್ಲೆ

ತಿಪಟೂರು: ಹಳೇ ವೈಷಮ್ಯದ ಹಿನ್ನೆಲೆಯುಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಯುವಕನೋರ್ವನಿಗೆ ಬಿಯರ್​ ಬಾಟಲಿಯಿಂದ ಚುಚ್ಚಿ ಹತ್ಯೆಗೈಯುವ ಪ್ರಯತ್ನ ನಡೆದಿದೆ. ಅರಸು ನಗರದ ಮುಬಾರಕ್​ ಹಲ್ಲೆಗೊಳಗಾಗಿದ್ದು, ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಮುಬಾರಕ್​ ಪ್ರಕರಣವೊಂದರಲ್ಲಿ ಜೈಲು ಸೇರಿ ಜ.29ರಂದು ಬಿಡುಗಡೆಯಾಗಿ ಬಂದಿದ್ದ ಎನ್ನಲಾಗಿದೆ. ಗುರುವಾರ ನಗರದ ಶೇವಿಂಗ್​ ಶಾಪ್​ನಲ್ಲಿದ್ದಾಗ ಸಾಹಿಲ್​ ಗುಂಪು ದಾಳಿ ಮಾಡಿ ಬಿಯರ್​ ಬಾಟಲಿಯಿಂದ ಚುಚ್ಚಿ ಹತ್ಯೆಗೈಯುವ ಪ್ರಯತ್ನ ನಡೆಸಿದೆ. ಪ್ರಾಣಾಪಾಯದಿಂದ ಮುಬಾರಕ್​ ಪಾರಾಗಿದ್ದಾರೆ. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಮುಬಾರಕ್​ ಗುಂಪು ಸಾಹಿಲ್​ ಸಹೋದರ ಗೋವರ್​ ಮೇಲೆ ಹಲ್ಲೆ ನಡೆಸಿದ್ದೇ ನಿನ್ನೆಯ ಪ್ರತಿಕಾರಕ್ಕೆ ಕಾರಣ ಎನ್ನಲಾಗಿದೆ. ಗಾಂಧೀನಗರದಲ್ಲಿ ಎರಡು ಗುಂಪುಗಳು ಪ್ರಾಬಲ್ಯ ಸ್ಥಾಪಿಸಲು ಪೈಪೋಟಿ ನಡೆಸುತ್ತಿದ್ದು, ಆಗಾಗ್ಗೆ ಗುಂಪುಗಳ ಮದ್ಯೆ ಹೊಡದಾಟ, ಬಡಿದಾಟಗಳು ನಡೆಯುತ್ತಿವೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net