ಅಪಘಾತದಲ್ಲಿ ಬೈಕ್​ ಸವಾರ ಸಾವು

images
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಅನಂತಪುರ ಗ್ರಾಮದ ಬಳಿ ಜತ್ತ&ಜಾಂಬೋಟಿ ರಾಜ್ಯ ಹೆದ್ದಾರಿ ಮೇಲೆ ಬೈಕ್​ ಸವಾರ ಆಯತಪ್ಪಿ ಬಿದ್ದು ಮೃತಪಟ್ಟ ಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಅನಂತಪುರ ಗ್ರಾಮ ಬಿರಿಮಲ್ಲ ನಿರ್ವತ್ತಿ ದೇವಖಾತೆ (42) ಮೃತ ವ್ಯಕ್ತಿ. ಡಪಳಾಪುರ ಗ್ರಾಮದ ಕಡೆಯಿಂದ ಅನಂತಪುರ ಗ್ರಾಮಕ್ಕೆ ಬೈಕ್​ ಮೇಲೆ ಬರುವಾಗ ದುರ್ಟನೆ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಬಿರಿಮಲ್ಲನನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಅಥಣಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net