ಅಪಘಾತದಲ್ಲಿ ಪತಿ ಸಾವು, ಪತ್ನಿ ಗಂಭೀರ

Published on

ಹುಲಿಯೂರುದುರ್ಗ: ಹುಲಿಯೂರುದುರ್ಗ ರಾಜ್ಯ ಹೆದ್ದಾರಿ&85ರಲ್ಲಿ ಬೈಕ್​ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಕ್ಕರಳೆ ಗ್ರಾಮದ ಆನಂದ್​(50) ಮೃತ. ಪತ್ನಿ ಸುನೀತಾ (45)ಗಂಭೀರವಾಗಿ ಗಾಯಗೊಂಡಿದ್ದಾರೆ. ಕೌಡ್ಲೆ ಗ್ರಾಮದ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್​ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ನೀಲಸಂದ್ರ ಗ್ರಾಮದ ಬಳಿ ಎದುರಿಗೆ ಬಂದ ಕಾರಿಗೆ ಡಿಕ್ಕಿ ತಪ್ಪಿಸಿಕೊಳ್ಳಲು ಬೈಕ್​ ಅನ್ನು ಆನಂದ್​ ಎಡಕ್ಕೆ ತಿರುಗಿಸಿದ ವೇಳೆ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ತೀವ್ರವಾಗಿ ಗಾಯಗೊಂಡ ಆನಂದ್​ ಸ್ಥಳದಲ್ಲೇ ಮೃತಪಟ್ಟಿದ್ದು, ಆತನ ಪತ್ನಿ ಸುನೀತಾ ಗಂಭೀರವಾಗಿ ಗಾಯಗೊಂಡಿದ್ದು, ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಮಯಕ್ಕೆ ಬಾರದ ಆಂಬುಲೆನ್ಸ್​: ಅಪಘಾತ ಸಂಭವಿಸಿದ ತಕ್ಷಣ ಗಾಯಾಳು ಕರೆದೊಯ್ಯಲು ನೀಲಸಂದ್ರ ಗ್ರಾಮಸ್ಥರು 108 ಆಂಬುಲೆನ್ಸ್​ಗೆ ಕರೆ ಮಾಡಿ ಒಂದು ಗಂಟೆಯಾದರೂ ಕುಣಿಗಲ್​, ಹುಲಿಯೂರುದುರ್ಗ ಅಥವಾ ಮಾಗಡಿಯಿಂದ ಯಾವುದೇ ಆಂಬುಲೆನ್ಸ್​ ಬರಲಿಲ್ಲ. ಕೊನೆಗೆ ಅಪಘಾತದಲ್ಲಿ ಆನಂದ್​ ಸಂಬಂಧಿಕರು ಕೌಡ್ಲೆ ಗ್ರಾಮದಿಂದ ಬಂದ ಬಳಿಕ ಸುನೀತಾರನ್ನು ಆಸ್ಪತ್ರೆಗೆ ಕರೆದೊಯ್ದರು. ತೀವ್ರವಾಗಿ ಗಾಯಗೊಂಡಿದ್ದ ಆನಂದ್​ ಸ್ಥಳದಲ್ಲೇ ಅರ್ಧಗಂಟೆಗೂ ಹೆಚ್ಚು ಕಾಲ ಒದ್ದಾಡಿ ಪ್ರಾಣಬಿಟ್ಟರು ಎಂದು ಸ್ಥಳಿಯರು ಆಕ್ರೋಶ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net