ಅಪಘಾತದಲ್ಲಿ ತಾಯಿ, ಮಗ ಸಾವು

PH 16
Published on

ಅರಳಗುಂಡಗಿ: ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಲ್ಲಂಬೆಳ್ಳಿ ಬಳಿ ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಾಯಿ-ಮಗ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.

ಅರಳಗುಂಡಗಿಯ ಭೀಮಾಬಾಯಿ ಹಣಮಂತರಾಯ (75), ಮಹಾಂತೇಶ ಕಾಡನೂರ (52) ಮೃತರು. ಪತ್ನಿ ಲಕ್ಷಿö್ಮÃ, ಮಕ್ಕಳಾದ ಅಭಿ, ಬಸವರಾಜ, ವಿದ್ಯಾಶ್ರೀ ಗಾಯಗೊಂಡಿದ್ದು, ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಾಂತೇಶ ಬೆಂಗಳೂರಿನ ಯಲಹಂಕ ಡಿಪೋ-11ರಲ್ಲಿ ಬಿಎಂಟಿಸಿ ಚಾಲಕನಾಗಿದ್ದ. ಇಡೀ ಕುಟುಂಬ ಬೆಂಗಳೂರಿನಲ್ಲಿ ವಾಸವಾಗಿತ್ತು. ಶ್ರಾವಣದ ನಡುವಿನ ಸೋಮವಾರ ನಿಮಿತ್ತ ಶ್ರೀ ಶರಣಬಸೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲು ಸ್ವಗ್ರಾಮಕ್ಕೆ ಬರುತ್ತಿದ್ದರು.

ಗೂಡ್ಸ್ ವಾಹನದಲ್ಲಿ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬರುತ್ತಿರುವಾಗ ಕಲ್ಲಂಬೆಳ್ಳಿ ಬಳಸಿ ಗೂಡ್ಸ್, ಕ್ಯಾಂಟರ್, ಖಾಸಗಿ ಬಸ್‌ಗಳು ಡಿಕ್ಕಿ ಹೊಡೆದುಕೊಂಡಿವೆ. ಇದರಿಂದ ಗೂಡ್ಸ್ನಲ್ಲಿದ್ದ ಭೀಮಾಬಾಯಿ, ಮಹಾಂತೇಶ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಪತ್ನಿ ಲಕ್ಷ್ಮೀಯ ಎರಡು ಕಾಲು ಮುರಿದರೆ, ಮೂವರು ಮಕ್ಕಳು ಮತ್ತು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಲಂಬೆಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net