

ಘಟಪ್ರಭಾ: ರಸ್ತೆ ಬದಿ ನಿಂತಿದ್ದ ವಾಹನದ ಹಿಂಬದಿಗೆ ಮಿನಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ವಾಹನ ಚಾಲಕ ಸಾವನ್ನಪ್ಪಿದ ಘಟನೆ ಘಟಪ್ರಭಾ ಪೊಲೀಸ್ ಠಾಣೆ ಸಮೀಪ ಗುರುವಾರ ರಾತ್ರಿ ಸಂಭವಿಸಿದೆ. ಮೃತನನ್ನು ಅರುಣ ಭಗೀರಥ ಟೋನಪೆ(21) ಎಂದು ಗುರುತಿಸಲಾಗಿದೆ.
ಗುರುವಾರ ರಾತ್ರಿ 10 ಗಂಟೆಗೆ ಅರುಣ ಮಿನಿಲಾರಿಯಲ್ಲಿ ನಾಗರಮುನ್ನೋಳಿಯಿಂದ ಗೋಕಾಕ ಕಡೆಗೆ ಬೆಲ್ಲ ಸಾಗಣೆ ಮಾಡುತ್ತಿದ್ದರು. ಈ ವೇಳೆ ಘಟಪ್ರಭಾ ಪಟ್ಟಣದ ಸರ್ಕಲ್‌ನಿಂದ ಕೂಗಳತೆ ದೂರದಲ್ಲಿ ನಿಂತಿದ್ದ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾರೆ. ಗಾಯಗೊಂಡಿದ್ದ ಅರುಣನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಆತ ಸಾವನಪ್ಪಿದ್ದಾನೆ ಎಂದು ಪೊಲೀಸರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.