ಅಪಘಾತದಲ್ಲಿ ಗಾಯಗೊಂಡಿದ್ದವ ಸಾವು

SRP _17-Anil(43)-05 jpg
Published on

ಶ್ರೀರಂಗಪಟ್ಟಣ: ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪಟ್ಟಣದ ಬೆನಕ ಕಾರು ಚಾಲನಾ ತರಬೇತಿ ಶಾಲೆಯ ತರಬೇತುದಾರ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾರೆ.


ಗಂಜಾಂನ ವಾಸಿ ಅನಿಲ್ ಅಂತೋನಿ(43) ಮೃತರು. ಮೂಲತಃ ಕೊಡಗು ಜಿಲ್ಲೆಯ ಸಿದ್ದಾಪುರದ ಅನಿಲ್ ಹಲವು ವರ್ಷಗಳಿಂದ ಪಟ್ಟಣ ಸಮೀಪದ ಗಂಜಾಂನಲ್ಲಿ ಪತ್ನಿ ಹಾಗೂ ಪುತ್ರನೊಂದಿಗೆ ನೆಲೆಸಿದ್ದು, ಶ್ರೀರಂಗಪಟ್ಟಣದಲ್ಲಿ ಕಾರು ಡ್ರೈವಿಂಗ್ ತರಬೇತುದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಆ.5ರಂದು ಪಿರಿಯಾಪಟ್ಟಣದಲ್ಲಿ ನಿಧನರಾಗಿದ್ದ ತಮ್ಮ ಅತ್ತೆಯ ಅಂತಿಮ ಕಾರ್ಯಕ್ಕೆ ತೆರಳಿದ್ದ ಅವರು, ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಅಸುನೀಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net