ಅಪಘಾತದಲ್ಲಿ ಕೊಣ್ಣೂರ ಯೋಧ ಸಾವು

11RAVIG2-Web
Published on

ಬೆಳಗಾವಿ: ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ನಿವಾಸಿ, ಭಾರತೀಯ ಸೇನೆಯ ಯೋಧ ಮಂಜುನಾಥ ಅಪ್ಪಣ್ಣ ಗೌಡಣ್ಣವರ (38) ನಾಗಾಲ್ಯಾಂಡ್ ಗಡಿಯಲ್ಲಿ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 18 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ, ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‌ನಲ್ಲಿ ನೇಮಕಗೊಂಡು ಭಾರತೀಯ ಸೇನೆಯ ಗಸ್ತು ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ತವ್ಯಕ್ಕೆ ತೆರಳುವಾಗ ಅರಣ್ಯದಲ್ಲಿ ವಾಹನ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಯೋಧನ ಪಾರ್ಥಿವ ಶರೀರ ಜು. 12ರಂದು ಸಂಜೆ 6ಕ್ಕೆ ಗೋವಾ ಮಾರ್ಗವಾಗಿ ಸ್ವಗ್ರಾಮಕ್ಕೆ ಆಗಮಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net