ತುರುವೇಕೆರೆ: ಪಟ್ಟಣದ ಕೆರೆ ಕೋಡಿ ಸಮೀಪ ದ್ವಿಚಕ್ರ ವಾಹನ ಹಾಗೂ ಟೆಂಪೋ ಮಧ್ಯೆ ಗುರುವಾರ ಸಂಜೆ ಅಪಘಾತ ಸಂಭವಿಸಿದ್ದು, ಡಿಪ್ಲೊಮೊ ವಿದ್ಯಾರ್ಥಿ ಮೃತಪಟ್ಟಿದ್ದು, ಇನ್ನೊಬ್ಬ ಗಂಭೀರ ಗಾಯಗೊಂಡಿದ್ದಾನೆ.
ತಿಪಟೂರು ತಾಲೂಕಿನ ಕಿಬ್ಬನಹಳ್ಳಿಯ ಆದಿತ್ಯ(21) ಮೃತ ವಿದ್ಯಾರ್ಥಿ. ಪಟ್ಟಣದ ಹೊರ ವಲಯದ ಡಿಪ್ಲೊಮೊ ಕಾಲೇಜಿನಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯಾಗಿರುವ ಆದಿತ್ಯ, ಗುರುವಾರ ಪರೀೆ ಮುಗಿಸಿಕೊಂಡು ಸ್ನೇಹಿತನ ಜತೆ ಸ್ವಗ್ರಾಮಕ್ಕೆ ತೆರಳುತ್ತಿರುವಾಗ ಅವಡ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಆದಿತ್ಯನ ತಲೆಗೆ ತೀವ್ರ ಪೆಟ್ಟುಬಿದ್ದು, ರಕ್ತಸ್ರಾವವಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಲಿಸಿಲ್ಲ. ಇನ್ನೊಬ್ಬ ವಿದ್ಯಾರ್ಥಿ ಸುನಿಲ್ಗೆ ಗಂಭೀರ ಗಾಯಗಳಾಗಿದ್ದು, ಆದಿಚುಂಚನಗಿರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.