ಅಪಘಾತದಲ್ಲಿ ಕಾರು ಚಾಲಕ ಸಾವು

13 gkp 02
Published on

ಗೋಣಿಕೊಪ್ಪ: ಗೋಣಿಕೊಪ್ಪ-ವಿರಾಜಪೇಟೆ ಹೆದ್ದಾರಿಯ ಕೈಕೇರಿಯಲ್ಲಿ ಸೋಮವಾರ ಮಧ್ಯಾಹ್ನ ಕಾರು-ಲಾರಿ ನಡುವೆ ಅಪಘಾತ ಸಂಭವಿಸಿ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ವಾಹನದಲ್ಲಿದ್ದ ಪುತ್ರನಿಗೆ ಗಾಯಗಳಾಗಿವೆ.


ಬಿಟ್ಟಂಗಾಲ ಗ್ರಾಮದ ನಂದೇಟೀರ ಸಜನ್ ಚಂಗಪ್ಪ (49) ಮೃತರು. ಪುತ್ರ ಶ್ರೇಯಸ್ (13)ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.


ಸಜನ್ ಚಂಗಪ್ಪ ಕಾರಿನಲ್ಲಿ ಪುತ್ರ ಶ್ರೇಯಸ್ ಜತೆ ಗೋಣಿಕೊಪ್ಪ ಕಡೆಯಿಂದ ಬಿಟ್ಟಂಗಾಲಕ್ಕೆ ತೆರಳುತ್ತಿದ್ದಾಗ ಮೈಸೂರು ಕಡೆಗೆ ತೆರಳುತ್ತಿದ್ದ ಲಾರಿಗೆ ಡಿಕ್ಕಿಯಾಯಿತು. ಸಜನ್ ಸ್ಥಳದಲ್ಲಿಯೇ ಸಾವಿಗೀಡಾದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಗೋಣಿಕೊಪ್ಪ ಪೊಲೀಸರು ಲಾರಿ ಚಾಲಕ ಬಸವರಾಜು (45)ನನ್ನು ವಶಕ್ಕೆ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net