ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವು

Published on

ಮಾಗಡಿ: ಕುಣಿಗಲ್​ನ ಉಂಗಿಬಂಡಿ ಬಳಿ ಕಾರು ಹಾಗೂ ಕ್ಯಾಂಟರ್​ ನಡುವೆ ಅಪಘಾತ ಸಂಭವಿಸಿ, ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಮಾಗಡಿ ತಾಲೂಕಿನ ಮತ್ತೀಕೆರೆ ಗ್ರಾಮದ ಪಟ್ಟಣದ ಸೀಬೇಗೌಡ (50), ಪತ್ನಿ ಶೋಭಾ (42), ಪುತ್ರ ಭಾನು ಕಿರಣ್​ಗೌಡ (15), ಮಗಳು ದುಂಬಿಶ್ರೀ (19) ಮೃತರು. ಕುಣಿಗಲ್​ನ ಖಾಸಗಿ ಶಾಲೆಗೆ ಭಾನು ಕಿರಣ್​ ಗೌಡನನ್ನು ಬಿಡಲು ಕುಟುಂಬ ಸಮೇತರಾಗಿ ತೆರಳಿದ್ದಾಗ ಅಪಘಾತ ಸಂಭವಿಸಿದೆ. 15 ವರ್ಷದ ಹಿಂದೆ ಮಾಗಡಿ ಪಟ್ಟಣದ ನಟರಾಜ ಬಡಾವಣೆಯಲ್ಲಿ ವಾಸಿಸುತ್ತಿದ್ದರು. ಎಸ್​ಪಿ ಕೆವಿ. ಅಶೋಕ್​ ಇತರರು ಸ್ಥಳ ಪರಿಶೀಲಿಸಿದರು. ಕುಣಿಗಲ್​ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net