ಅಪಘಾತದಲ್ಲಿ ಐವರಿಗೆ ಗಾಯ

28 HANUR 3
Published on

ಹನೂರು: ತಾಲೂಕಿನ ವಡಕೆಹಳ್ಳ ಗ್ರಾಮದ ಬಳಿ ಶುಕ್ರವಾರ ಟೆಂಪೋ ಟ್ರಾವೆಲ್ಲರ್, ಜೀಪ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಐವರು ಗಾಯಗೊಂಡಿದ್ದಾರೆ.

ಬೈಕ್ ಸವಾರರಾದ ಬೆಂಗಳೂರಿನ ರಾಕೇಶ್ (20), ವಿಜೇಂದ್ರ (20) ಹಾಗೂ ಜೀಪ್‌ನಲ್ಲಿದ್ದ ಕಿರಣ್‌ಕುಮಾರ್ (32), ಮಹೇಂದ್ರ (34), ಮಾದೇಶ್ (36) ಎಂಬುವರೇ ಗಾಯಗೊಂಡವರು.

ಜೀಪ್‌ನಲ್ಲಿದ್ದ ಮೂವರು ಹಾಗೂ ಬೈಕ್‌ನಲ್ಲಿದ್ದ ಇಬ್ಬರು ಮಧ್ಯಾಹ್ನ ಮ.ಬೆಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ಎದುರು ಬಂದ ಟಿಟಿ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಐವರು ಗಾಯಗೊಂಡಿದ್ದಾರೆ. ಈ ವೇಳೆ ಸ್ಥಳೀಯರು ತುರ್ತು ವಾಹನದ ಮೂಲಕ ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿ ಪೊಲೀಸರು ಪರಿಶೀಲನೆ ನಡೆಸಿದರು. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net