ತಿಪಟೂರು: ತಾಲೂಕಿನ ಮತ್ತಿಹಳ್ಳಿ ಗೇಟಿನ ಬಳಿ ಬುಧವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಲೂಕಿನ ಐಯ್ಯನಬಾವಿ ಗ್ರಾಮದ ಉಮೇಶ್(32) ಮತ್ತು ರಜನೀಕಾಂತ್ (33) ಮೃತರು. ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನ ಅಜಾಗರೂಕತೆ ಮತ್ತು ಅತಿವೇಗದ ಚಾಲನೆಯಿಂದ ಇಬ್ಬರು ಬೈಕ್ ಸವಾರರು ಮೃತ್ತಪಟ್ಟಿದ್ದಾರೆ. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಹೊನ್ನವಳ್ಳಿ ಠಾಣೆಯ ಪಿಎಸ್ಐ ಆರ್.ರಾಜೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿದ್ದಾರೆ.