

ಮೂಡಲಗಿ: ಗುರ್ಲಾಪುರ ಹದ್ದಿಯ ನಿಪ್ಪಾಣಿ&ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಬೆಕ್ ಹಾಗೂ ಲಾರಿ ಮಧ್ಯೆ ಭಾನುವಾರ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಲೂಕಿನ ರಂಗಾಪುರ ಗ್ರಾಮದ ಸುರೇಶ ಮಾರಾಪುರ (32) ಹಾಗೂ ಪಟ್ಟಣದ ಕಜ್ಜಾಯ ಮಡ್ಡಿಯ ಶ್ರೀಶೆಲ ಹಾದಿಮನಿ (34) ಅಪಘಾತದಲ್ಲಿ ಮತಪಟ್ಟಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಮೂಡಲಗಿ ಪೊಲೀಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.