ಕೊರಟಗೆರೆ: ತಾಲೂಕಿನ ಗೌರಗಾನಹಳ್ಳಿ ಬಳಿ ದ್ವಿಚಕ್ರವಾಹನ ಮತ್ತು ಬುಲೆರೋ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು
ಗಂಭೀರವಾಗಿ ಗಾಯಗೊಂಡಿದ್ದಾರೆ. ದ್ವಿಚಕ್ರವಾಹನ ಸವಾರರಾದ ಚೇತನ್(24) ಮತ್ತು ರಾಕೇಶ್ (23) ಗಾಯಗೊಂಡಿದ್ದು, ಕೈಕಾಲು ಮುರಿತವಾಗಿದೆ. ಸ್ಥಳಿಯರ ಸಹಕಾರದೊಂದಿಗೆ ತಣವೇ ಅವರನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.