ಅಪಘಾತದಲ್ಲಿ ಇಬ್ಬರ ಸಾವು

10Jaggu6
ಅಪಘಾತದಲ್ಲಿ ಕಾರು ಜಖಂಗೊಂಡಿರುವುದು.
Published on

ಬೆಳಗಾವಿ: ಪಂಢರಪುರ ವಿಠ್ಠಲನ ದರ್ಶನಕ್ಕೆ ತೆರಳುತ್ತಿದ್ದ ಬೆಳಗಾವಿಯ ಐವರು ವಾರಕರಿಗಳ ಪೈಕಿ ಇಬ್ಬರು ವಾರಕರಿಗಳು ಸೊಲ್ಲಾಪುರ ಜಿಲ್ಲೆಯ ಸಂಗೋಳ ಬಳಿ ರಸ್ತೆ ಅಪಘಾತದಲ್ಲಿ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದರಿಂದ ದುರ್ಘಟನೆ ಸಂಭವಿಸಿದೆ. ಮೂವರು ಗಾಯಗೊಂಡಿದ್ದಾರೆ. ರಾಜು ಶಿಂದೋಳ್ಕರ (45), ಪರಶುರಾಮ ಸಂಭಾಜಿ ಜಂಗ್ರುಚೆ (50) ಮೃತ ದುರ್ದೈವಿಗಳು. ಗಿತೇಶ ಕೋಕಿತ್ಕರ (26), ಅಭಿಜಿತ ಹುಂದರೆ (28) ಮತ್ತು ಚಾಲಕ ರಾಜು ಕೃಷ್ಣ ಮಜುಕರ (26) ಗಾಯಗೊಂಡವರು. ಪಂಢರಪುರದ ಲೈಫ್‌ಲೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಆಷಾಢ ಶುದ್ಧ ಏಕಾದಶಿ ಪ್ರಯುಕ್ತ ವಿಠ್ಠಲನ ದರ್ಶನಕ್ಕೆ ಪಂಢರಪುರಕ್ಕೆ ಐವರು ತೆರಳುತ್ತಿದ್ದರು. ಪಂಢರಪುರ-ಸಾಗೋಳ ರಸ್ತೆಯ ಕಾಸೆಗಾಂವ ಕವಲುದಾರಿ ಬಳಿ ದುರ್ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net