ಅಪಘಾತದಲ್ಲಿ ಆಟೋ ಚಾಲಕ ಮೃತ

Published on


ಹಾಸನ: ಹೊಳೆನರಸೀಪುರದ ಹೇಮಾವತಿ ಸೇತುವೆ ಮೇಲೆ ಬುಧವಾರ ಸಂಜೆ ಆಟೋ ಹಾಗೂ ಟೆಂಪೊ ಟ್ರಾವೆಲರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಡಿವಾಳ ಬೀದಿಯ ಲಕ್ಷ್ಮಣ ಅವರ ಪುತ್ರ ಎಚ್.ಎಲ್.ಧ್ರುವ() ಮೃತರು. ಧ್ರುವ ಅವರಿಗೆ ತಾಯಿ, ಪತ್ನಿ, ಇಬ್ಬರು ಪುಟ್ಟ ಮಕ್ಕಳು ಇದ್ದಾರೆ. ಗುರುವಾರ ಸಂಜೆ ಅಂತ್ಯಕ್ರಿಯೆ ನಡೆಯಿತು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net