ಅಪಘಾತದಲ್ಲಿ 25ಕ್ಕೂ ಹೆಚ್ಚು ಮಂದಿಗೆ ಗಾಯ

Published on

ತುಮಕೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್​ ಹಿಂಬಂದಿಯಿಂದ ಕ್ಯಾಂಟರ್​ಗೆ ಡಿಕ್ಕಿ ಹೊಡೆದ ಹಿನ್ನೆಲೆ ಗರ್ಭಿಣಿ ಸೇರಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದು ಬುಧವಾರ ತಾಲೂಕಿನ ಹಿರೇಹಳ್ಳಿ ಎನ್​ಎಚ್​ 48ರಲ್ಲಿ ನಡೆದಿದೆ. ಬೆಂಗಳೂರು ನಿಂದ ಹೊಸದುರ್ಗಕ್ಕೆ ತೆರಳುತ್ತಿದ್ದ ಸಾರಿಗೆ ಬಸ್​ ಹಿರೇಹಳ್ಳಿ ಬಳಿ ಮುಂಬದಿಯಲ್ಲಿ ಹೋಗುತ್ತಿದ್ದ ಕ್ಯಾಂಟರ್​ಗೆ ಡಿಕ್ಕಿ ಹೊಡೆದಿದೆ. ಬಸ್​ನಲ್ಲಿ ಪಯಣಿಸುತ್ತಿದ್ದ 25ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖತೊಳೆಯಲು ನೀರಿಗಿಳಿದ ಯುವಕ ಸಾವು

ತಿಪಟೂರು: ತಾಲೂಕಿನ ಮತ್ತಿಹಳ್ಳಿಯಲ್ಲಿ ಮುಖತೊಳೆಯಲು ನೀರಿಗಿಳಿದ ಯುವಕ ಮುಳುಗಿ ಮೃತಪಟ್ಟಿದ್ದಾನೆ. ಮತ್ತಿಹಳ್ಳಿ ಗ್ರಾಮದ ಕೆಂಪಮ್ಮ ಅವರ ಪುತ್ರ, ಗಾರೆ ಕೆಲಸ ಮಾಡಿಕೊಂಡಿದ್ದ ದಯಾನಂದ್​(20) ಶನಿವಾರ ಸಂಜೆ ಗ್ರಾಮ ಸಮೀಪದ ಕಟ್ಟೆಯಲ್ಲಿ ಮುಖತೊಳೆಯಲು ಹೋಗಿದ್ದಾಗ ಅವಡ ಸಂಭವಸಿದೆ. ನಾಪತ್ತೆಯಾದ ದಯಾನಂದನಿಗಾಗಿ ಹುಡುಕಾಟ ನಡೆಸಲಾಗಿತ್ತು. ತಾಲೂಕು ಅಗ್ನಿಶಾಮಕ ದಳ ಮತ್ತು ತುಮಕೂರಿನಿಂದ ಬಂದಿದ್ದ ಅಗ್ನಿಶಾಮಕ ಸಿಬ್ಬಂದಿ ಸೋಮವಾರದವರೆಗೂ ಕಾರ್ಯಾಚರಣೆ ನಡೆಸಿದರೂ ಶವ ಪತ್ತೆಯಾಗದ ಹಿನ್ನೆಲೆಯಲ್ಲಿ ಮಂಗಳವಾರ ಮುಳುಗುತಜ್ಞ ಮಲ್ಪೆ ಈಶ್ವರ್​ ಅವರನ್ನು ಕರೆಸಲಾಗಿತ್ತು. ಕಾರ್ಯಾಚರಣೆಯಲ್ಲಿ ಮಂಗಳವಾರ ದಯಾನಂದನ ಮೃತ ದೇಹ ಹೊರತೆಗೆಯಲಾಗಿದೆ. ಹೊನ್ನವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನಿಗೆ ತಾಯಿ ಮತ್ತು ತಮ್ಮ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net