

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಎಂಡಿ ಇಂಡಿಯಾ/ಬಜಾಜ್ ಅಲೆಯನ್ಸ್ ಸಹಭಾಗಿತ್ವದಲ್ಲಿ ರಸ್ತೆ ಅಪಘಾತದ ಗಾಯಾಳುಗಳಿಗೆ 30 ಸಾವಿರ ರೂ. ವರೆಗೆ ಉಚಿತ ಚಿಕಿತ್ಸೆಗೆ ನೀಡಲು ಬಸವೇಶ್ವರ ವೈದ್ಯಕೀಯ ಆಸ್ಪತ್ರೆಯಲ್ಲಿ ಅನುಕೂಲ ಕಲ್ಪಿಸಲಾಗಿದೆ ಎಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್.ರಾಜೇಶ್ ತಿಳಿಸಿದರು.
ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿ ಮಾತನಾಡಿದ ಬಸವೇಶ್ವರ ವೈದ್ಯಕೀಯ ಕಾಲೇಜು ಉಪ ಅಧೀಕ್ಷಕ ಡಾ.ನಾಗೇಂದ್ರಗೌಡ, ಅಪಘಾತದಂತ ತುರ್ತು ಸಂದರ್ಭಗಳಲ್ಲಿ ಜೀವರಕ್ಷಣೆ ಮುಖ್ಯವಾಗಿರುತ್ತದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ಯೋಜನೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ (7892305613 ಅಥವಾ 18001021949) ಸಂಪರ್ಕಿಸಬಹುದೆಂದು ಆಸ್ಪತ್ರೆ ವ್ಯವಸ್ಥಾಪಕ ಸತ್ಯನಾರಾಯಣ್ ತಿಳಿಸಿದರು.
ಡೀನ್ ಡಾ.ಪ್ರಶಾಂತ್, ಮಾರ್ಕೆಟಿಂಗ್ ವಿಭಾಗದ ಮುಖಸ್ಥ ಪಿ.ಸತೀಶ್, ಎಂಡಿ ಇಂಡಿಯಾ/ಬಜಾಜ್ ಅಲೈಯನ್ಸ್ ಸಂಸ್ಥೆ ಯೋಜನಾ ನಿರ್ದೇಶಕ ಪ್ರವೀಣ್‌ಕುಮಾರ್, ಜಿಲ್ಲಾ ಯೋಜನಾ ಸಂಯೋಜಕ ಡಿ.ಮಣಿಕಂಠನ್, ವಸಂತನಾಯಕ್ ಇದ್ದರು.