ಅಪಘಾತಕ್ಕೀಡಾದ ಆಕ್ಸಿಜನ್ ಟ್ಯಾಂಕರ್

7 BGV jaggu 1-Web
ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಮುಂದೆ ಚಲಿಸುತ್ತಿದ್ದ ಲಾರಿಯ ಹಿಂಬದಿಗೆ ಆಕ್ಸಿಜನ್ ಟ್ಯಾಂಕರ್ ಡಿಕ್ಕಿ ಹೊಡೆದಿರುವುದು.
Published on

ಹಿರೇಬಾಗೇವಾಡಿ: ಬಳ್ಳಾರಿಯಿಂದ ಆಕ್ಸಿಜನ್ ಹೊತ್ತು ಬೆಳಗಾವಿ ಕಡೆಗೆ ಬರುತ್ತಿದ್ದ ಟ್ಯಾಂಕರ್, ತಾಲೂಕಿನ ಮುತ್ನಾಳ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ- 4ರಲ್ಲಿ ಶುಕ್ರವಾರ ಬೆಳಗಿನ ಜಾವ ಅಪಘಾತಕ್ಕೀಡಾಗಿದೆ. ಇನ್ನೊಂದು ವಾಹನ ಓವರ್‌ಟೇಕ್ ಮಾಡುವ ವೇಳೆ ಮುಂಬದಿಯ ಲಾರಿಗೆ ಆಕ್ಸಿಜನ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಟ್ಯಾಂಕರ್ ಟೈರ್ ಬ್ಲಾಸ್ಟ್ ಆಗಿ, ಎಕ್ಸಲ್ ತುಂಡಾಗಿದೆ.

ಅದೃಷ್ಟವಶಾತ್ ಆಕ್ಸಿಜನ್ ಲಿಕ್ವಿಡ್ ತುಂಬಿದ್ದ ಟ್ಯಾಂಕ್‌ಗೆ ಹಾನಿಯಾಗಿಲ್ಲ. ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಕೊಲ್ಲಾಪುರದಿಂದ ಎಸ್ಕಾರ್ಟ್‌ನಲ್ಲಿ ಖಾಲಿ ಟ್ಯಾಂಕರ್ ತರಲು ಡಿಸಿಎಂ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಎಸ್ಪಿ ಲಕ್ಷ್ಮಣ ನಿಂಬರಗಿ ಅವರಿಗೆ ಸೂಚಿಸಿದರು. ಅಪಘಾತಕ್ಕೊಳಗಾದ ಟ್ಯಾಂಕರ್‌ನಲ್ಲಿ 16 ಕೆ.ಎಲ್. ಆಕ್ಸಿಜನ್ ಲಿಕ್ವಿಡ್ ಇದ್ದು, ಖಾಲಿ ಟ್ಯಾಂಕರ್‌ಗೆ ತುಂಬಿಸಿ ಬೆಳಗಾವಿಗೆ ತರಲಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದ್ದಾರೆ. ಅಪಘಾತಕ್ಕೀಡಾಗಿದ್ದ ಟ್ಯಾಂಕರ್‌ನಿಂದ 14 ಗಂಟೆ ಕಾರ್ಯಾಚರಣೆ ಬಳಿಕ ಬೇರೊಂದು ಟ್ಯಾಂಕರ್‌ಗೆ ಆಕ್ಸಿಜನ್ ಫಿಲ್ ಮಾಡಲಾಗಿದೆ. ಮಹಾರಾಷ್ಟ್ರದಿಂದ ಬಂದಿದ್ದ ಪರ್ಯಾಯ ಟ್ಯಾಂಕರ್ ಮೂಲಕ ಮೂರು ಟ್ರಿಪ್‌ನಲ್ಲಿ ಲಿಕ್ವಿಡ್ ಆಕ್ಸಿಜನ್‌ಅನ್ನು ಕಾಕತಿಯ ಆಕ್ಸಿಜನ್ ಘಟಕಕ್ಕೆ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net