ಅಪಘಾತ: ಸಂತ್ರಸ್ತ ಕುಟುಂಬಕ್ಕೆ 3.44 ಲಕ್ಷ ರೂ. ನೆರವು

HOS WEB
Published on

ಹೊಸನಗರ: ಹುಲಿಕಲ್ ಬಳಿ ಭೀಕರ ರಸ್ತೆ ಅಪಘಾತದಲ್ಲಿ ತಂದೆ- ತಾಯಿ ಕಳೆದುಕೊಂಡ ಅನಾಥ ಮಕ್ಕಳಿಗೆ ಮತ್ತು ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಸಂತ್ರಸ್ತ ತಾಯಿಗೆ ಸಾರ್ವಜನಿಕರಿಂದ ಸಂಗ್ರಹಗೊಂಡ 3.44 ಲಕ್ಷ ರೂ. ಹಣದ ಚೆಕ್‌ನ್ನು ಹಸ್ತಾಂತರಿಸಲಾಯಿತು.

ಅಪಘಾತಗೊಂಡು ದಿಕ್ಕಿಲ್ಲದಂತಾದ ಕುಟುಂಬಗಳಿಗೆ ಹಣದ ನೆರವಿಗಾಗಿ ಮನವಿ ಮಾಡಲಾಗಿತ್ತು. ಈ ಬಗ್ಗೆ ‘ವಿಜಯವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಒಕ್ಕಲಿಗ ಸಮುದಾಯ ಸೇರಿದಂತೆ ಸರ್ವ ಸಮುದಾಯದ ಜನರು ವಿಶೇಷವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ 3.44 ಲಕ್ಷ ರೂ. ಸಂಗ್ರಹವಾಗಿತ್ತು. ಒಕ್ಕಲಿಗ ಸಮುದಾಯದ ಪ್ರಮುಖರಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಪೂರ್ಣೇಶ ಮಲೆಬೈಲ್, ಕೆ.ಬಿ.ಕೃಷ್ಣಮೂರ್ತಿ ನೇತೃತ್ವದಲ್ಲಿ ಮಾಸ್ತಿಕಟ್ಟೆ ಸಮೀಪದ ಕಂಪದ ಕೈ ಸಂತ್ರಸ್ತರ ಮನೆಗೆ ಹೋಗಿ ಸಂಗ್ರಹವಾದ ಹಣವನ್ನು ಆ ಕುಟುಂಬಗಳಿಗೆ ನೀಡಲಾಯಿತು.

ಹುಲಿಕಲ್ ಅಪಘಾತದಲ್ಲಿ ಇದ್ದ ಒಬ್ಬ ಮಗ ಶಿಶಿರನನ್ನು ಕಳೆದು ಇಂದಿರಾ ಏಕಾಂಗಿಯಾಗಿದ್ದರು. ಪತಿ ಮತ್ತು ಮಗಳು ಕೂಡ ಹಿಂದೆ ಸಾವನ್ನಪ್ಪಿದ್ದರು. ಇನ್ನು ಹುಲಿಕಲ್ ಅಪಘಾತದಲ್ಲಿ ತಂದೆ ರವಿ, ತಾಯಿ ಶಾಲಿನಿ ಕೂಡ ಮೃತ ಪಟ್ಟು ಅಲೋಕ್ ಮತ್ತು ಅನೂಪ್ ಅನಾಥರಾಗಿದ್ದರು. ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಂದನೆಯಿಂದಾಗಿ ಖಾಸಗಿ ಆಸ್ಪತ್ರೆಯು ಮೃತ ಶಾಲಿನಿ ಚಿಕಿತ್ಸಾ ಹಣವನ್ನು ವಾಪಸು ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net