ಅಪಘಾತ ತಂದೆ, ಮಗ ಸಾವು

Crime Logo
Published on

ಕಲಬುರಗಿ: ನಗರದಲ್ಲಿ ಲಾರಿ ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ತಂದೆ-ಮಗ ಸ್ಥಳದಲ್ಲೆ ಮೃತಪಟ್ಟು, ಇನ್ನಿಬ್ಬರಿಗೆ ಗಾಯಗಳಾದ ಘಟನೆ ಶನಿವಾರ ನಡೆದಿದೆ. ಅಫಜಲಪುರ ತಾಲೂಕಿನ ಟಾಕಳಿ ಗ್ರಾಮದ ಮುನೀರ್ ಮಕಾನದಾರ (೩೫) ಮತ್ತು ಅವರ ಮಗ ಅಮೀರ್ ಮಕಾನದಾರ (೬) ಮೃತರು. ಮೃತನ ಪತ್ನಿ ಮಾಶಾ ಮತ್ತು ಮಗ ಅದ್ನಾನ್(೨) ಗಾಯಗೊಂಡಿದ್ದಾರೆ. ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿತ್ತು. ಮುನೀರ್ ಪತ್ನಿ, ಇಬ್ಬರು ಮಕ್ಕಳೊಂದಿಗೆ ಬೈಕ್ ಮೇಲೆ ನಗರದ ಮುಸ್ಲಿಂ ಸಂಘದಿಂದ ಸ್ವಗ್ರಾಮ ಅಫಜಲಪುರ ತಾಲೂಕಿನ ಟಾಕಳಿಗೆ ತೆರಳುತ್ತಿದ್ದರು. ಈ ವೇಳೆ ಲಾರಿ ಡಿಕ್ಕಿ ಹೊಡೆದಿದೆ. ಸಂಚಾರಿ ಪೊಲೀಸ್ ಠಾಣೆ-೨ರಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net