ಅನ್ಯಾಯವಾಗಿದ್ದರೆ ಸಿಎಂ ಬಳಿ ಚರ್ಚಿಸಲಿ- ಎಸ್ಸೆಸ್‌ಗೆ ಸತೀಶ್ ಜಾರಕಿಹೊಳಿ ಸಲಹೆ

Screenshot_2023-10-02-07-14-36-633_com.android.chrome.jpg
Published on

ದಾವಣಗೆರೆ: ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಿದ್ದರೆ ಶಾಮನೂರು ಶಿವಶಂಕರಪ್ಪನವರು ಮುಖ್ಯಮಂತ್ರಿ ಬಳಿ ಚರ್ಚಿಸಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ರಾಜನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಿಂತ ಕೆಲಸದ ಆಧಾರದ ಮೇಲೆ ಜಿಲ್ಲಾಧಿಕಾರಿಗಳನ್ನು ನಿಯೋಜಿಸಿಕೊಳ್ಳಲಾಗುತ್ತದೆ. ಸಿಎಂ ಬಳಿ ಹೇಳಿದಲ್ಲಿ ಸರಿಪಡಿಸಬಹುದು ಎಂದರು.

ಶಿವಶಂಕರಪ್ಪ ಅವರ ಹೇಳಿಕೆ ಹಿಂದೆ ಅಸಮಾಧಾನವಿದೆ. ಸರ್ಕಾರ ಬೀಳಿಸುವ ಉದ್ದೇಶವೇನೂ ಇಲ್ಲ. ಸಿಎಂ ಕ್ಯೂನಲ್ಲಿ ತುಂಬಾ ಜನ ಇದ್ದಾರೆ. ಅವರವರ ಸರದಿ ಬರುವವರೆಗೆ ಕಾಯಬೇಕು ಎಂದು ತಿಳಿಸಿದರು.

ಸರ್ಕಾರ ಎಂದರೆ ಸಮುದ್ರದಂತೆ. ಯಾರು ಯಾವ ಕಡೆ ಈಜುತ್ತಾರೋ ಗೊತ್ತಾಗಲ್ಲ. ಸಮತೋಲನ ಮಾಡುವುದು ಸರ್ಕಾರದ ಕರ್ತವ್ಯ. ಹೀಗಾಗಿ ನಿರ್ದಿಷ್ಟವಾಗಿ ಕೇಳಬೇಕು ಎಂದು ಪ್ರತಿಕ್ರಿಯಿಸಿದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net