ಅನ್ಯಾಯ ಆಗದಂತೆ ಕುಡಾ ನೋಡಿಕೊಳ್ಳಲಿ

2107KLB09
Published on

ಕಲಬುರಗಿ: ನಗರದ ಹೊರವಲಯದ ಕೋಟನೂರ ಬಳಿಯ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ನಿವೇಶನ ಖರೀದಿ ಮಾಡಿದವರು ಪುನಃ ಹಣ ನೀಡಬೇಕು ಎಂಬ ಉಹಾಪೋಹಗಳಿದ್ದು, ಅನ್ಯಾಯ ಆಗದಂತೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಅಟಲï ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ನಿವೇಶನ ಖರೀದಿಸಿದವರು ಭಾನುವಾರ ಸಭೆಯಲ್ಲಿ ಮಾತನಾಡಿದ ಖರೀದಿದಾರರು, ಕುಡಾಗೆ ಹಣ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಲಾಗಿದೆ ಎಂಬ ಮಾತು ಕೇಳಿ ಬಂದಿದೆ. ರೈತರಿಂದ ಭೂಮಿ ಖರೀದಿಸಿದ್ದು ನಗರಾಭಿವೃದ್ಧಿ ಪ್ರಾಧಿಕಾರ. ಹಿಂದೆ ನಗರದ ವಿವಿಧೆಡೆ ನಿವೇಶನ ಮಾಡಿ ಲಾಭ ಮಾಡಿಕೊಂಡಾಗ ರೈತರಿಗೆ, ಖರೀದಿದಾರರಿಗೆ ಲಾಭ ನೀಡಿಲ್ಲ. ಇದೀಗ ನಿವೇಶನ ಖರೀದಿದಾರರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ನಿವೇಶನದ ಖರೀದಿಸಿದ ವೀರಭದ್ರ ಸಿಂಪಿ ಮಾತನಾಡಿ, ೨೦೧೧ರಲ್ಲಿ ನಿವೇಶನ ಖರೀದಿಸಲಾಗಿದೆ. ೧೩ ವರ್ಷದ ನಂತರ ಕಷ್ಟಕ್ಕೆ ಸಿಲುಕಿದಂತಾಗಿದೆ. ಮೊದಲಿಗೆ ಹೆಚ್ಚುವರಿ ಹಣ ಕಟ್ಟಬೇಕಾಗುತ್ತದೆ ಎಂಬ ಮಾತು ಹೇಳಿದ್ದರೇ ನಾವು ಯೋಚಿಸುತ್ತಿz್ದೆÃವು. ಇದೀಗ ಪುನಃ ಹಣ ಕಟ್ಟಬೇಕು ಎಂಬ ಮಾತು ಕೇಳಿ ಬರುತ್ತಿದ್ದು, ಪ್ರಾಧಿಕಾರದವರು ಅನ್ಯಾಯ ಮಾಡಬಾರದು ಎಂದು ಹೇಳಿದರು.
ನಿವೇಶನ ಖರೀದಿದಾರ ವಾಸುದೇವ ಚವ್ಹಾಣ್ ಮಾತನಾಡಿ, ೨೦೩೦ ನಿವೇಶನಗಳನ್ನು ಎಸ್‌ಟಿ, ಎಸ್‌ಟಿ ಹಾಗೂ ಬಡವರು ಖರೀದಿಸಿದ್ದಾರೆ. ಬಡವರು ಹಣ ಕೂಡಿಸಿ, ಸಾಲ ಮಾಡಿ ೪೦೬೦ ಅಥವಾ ಅದಕ್ಕಿಂತ ಹೆಚ್ಚಿನ ನಿವೇಶನ ಖರೀದಿಸಿದ್ದಾರೆ. ಇದೀಗ ಮೊದಲು ನೀಡಿದ್ದರ ಎರಡರಷ್ಟು ಹಣ ನೀಡಬೇಕು ಎಂಬ ಮಾತು ಕೇಳಿ ಬರುತ್ತಿದ್ದು, ನಿಜವಾಗಿದ್ದರೆ ಭಾರಿ ತೊಂದರೆ ಆಗಲಿದೆ ಎಂದರು.
ಗುರಣ್ಣ ಹರವಾಳ, ಹರ್ಷವರ್ಧನ ವೈದ್ಯ, ಚೆನ್ನು ಸಾಹುಕಾರ, ಸಾಗರ ಪಾಟೀಲ್, ಶಿವರಾಜ ಕಂದಕೂರ ವಕೀಲರು, ಮ¯್ಲÉÃಶಪ್ಪ ಬಂದರವಾಡ, ಶರಣಬಸಪ್ಪ ನಿಂಬೆಣ್ಣಿ, ಡಾ.ಸಿ.ಎಸ್.ನಿಂಗಪ್ಪ, ಸುನೀಲ ಸಜ್ಜನ ದಿಗ್ಗಾಂವ ಸೇರಿ ನಿವೇಶನ ಖರೀದಿಸಿದ ೩೦೦ಕ್ಕೂ ಹೆಚ್ಚಿನ ಜನರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net