

ಕಿಕ್ಕೇರಿ: ಪಟ್ಟಣದ ಹಳೇ ಬಸ್‌ನಿಲ್ದಾಣದಲ್ಲಿ ವಿನಾಯಕ ಓಮ್ನಿ ವ್ಯಾನ್ ಮಾಲೀಕರು ಹಾಗೂ ಚಾಲಕರ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಇನ್ಸ್‌ಪೆಕ್ಟರ್ ಸುನಿಲ್‌ಕುಮಾರ್, ಕನ್ನಡ ಹಬ್ಬ ಎಂದರೆ ನೆನಪಾಗುವುದು ವಾಹನ ಚಾಲಕರು. ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿದ ಕನ್ನಡ ನಾಡು ಕಿರಿದಾಗಲು ನಮ್ಮಲ್ಲಿರುವ ಸಂಕುಚಿತ ಭಾವನೆಯೇ ಕಾರಣ. ಹೆತ್ತ ತಾಯಿಯಷ್ಟೇ ಭಾಷೆಯನ್ನು ಪ್ರೀತಿಸಿ ಅನ್ಯಭಾಷಿಗರಿಗೂ ಕನ್ನಡ ಕಲಿಸಿ ಕನ್ನಡದ ವಾತಾವರಣ ನಿರ್ಮಿಸಿದರೆ ತನ್ನಿಂದ ತಾನೆ ಭಾಷೆ, ಸಂಸ್ಕೃತಿ ಎಲ್ಲವೂ ಉಳಿಯಲಿದೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್ ಧ್ವಜಾರೋಹಣ ನೆರವೇರಿಸಿದರು. ಸಂಘದ ಸದಸ್ಯರು ವಾಹನಗಳಿಗೆ ಕನ್ನಡ ಬಾವುಟ ಕಟ್ಟಿ, ಹೂಗಳಿಂದ ಶೃಂಗರಿಸಿ ಮೆರವಣಿಗೆ ನಡೆಸಿದರು. ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.
ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಪ್ರಭಾಕರ್, ಸಂಘದ ಸದಸ್ಯರಾದ ಬಾಬಣ್ಣ, ಆನೆಗೊಳ ರಘು, ಗಂಗೇನಹಳ್ಳಿ ರಘು, ಮಂಜು, ರಂಗಪ್ಪ, ನಂದೀಶ್, ಬಸವರಾಜು, ಪ್ರದೀಪ, ಶಿವಣ್ಣ, ಶೇಖರ್, ಶಿವ, ಮೋಹನ್ ಮತ್ತಿತರರಿದ್ದರು.