ಅನ್ಯಭಾಷಿಕರೊಂದಿಗೆ ಕನ್ನಡದಲ್ಲೇ ಮಾತನಾಡಿ

mysore
Published on

ಮೈಸೂರು: ಕನ್ನಡಿಗರು ಅನ್ಯಭಾಷಿಕರೊಂದಿಗೆ ಕನ್ನಡದಲ್ಲೇ ಮಾತನಾಡಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ವಾನಸ ಸಲಹೆ ನೀಡಿದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಜಯನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಾತನಾಡಿದರು.

ರಾಜ್ಯದಲ್ಲಿ ಬಹಳಷ್ಟು ವರ್ಷಗಳಿಂದ ನೆಲೆಸಿರುವ ಅನ್ಯಭಾಷಿಕರು ಕನ್ನಡ ಕಲಿಯುತ್ತಿಲ್ಲ. ನಾವು ಸಹ ಅವರೊಂದಿಗೆ ಕನ್ನಡ ಮಾತನಾಡುವುದಿಲ್ಲ. ಬದಲಿಗೆ ಅವರ ಭಾಷೆಯಲ್ಲೇ ವ್ಯವಹರಿಸುತ್ತೇವೆ. ಹೀಗಾಗಿ, ಅವರು ಕನ್ನಡ ಕಲಿಕೆಗೆ ಆಸಕ್ತಿ ತೋರುತ್ತಿಲ್ಲ. ನಾವು ಅನ್ಯಭಾಷಿಕರೊಂದಿಗೆ ಕನ್ನಡದಲ್ಲೇ ಮಾತನಾಡಬೇಕು. ಈ ಮೂಲಕ ಕನ್ನಡ ಕಲಿಕೆಯ ಅನಿವಾರ್ಯತೆಯನ್ನು ಸೃಷ್ಟಿಸಬೇಕು ಎಂದು ಹೇಳಿದರು.

ಈಗಲೂ ಕನ್ನಡ ಉಳಿಸಿ, ಕನ್ನಡ ಬೆಳೆಸಿ ಎಂದು ಹೇಳಬೇಕಾಗಿರುವುದು ಕಳವಳಕಾರಿ ಸಂಗತಿ. ಹೀಗೆ ಹೇಳುವುದನ್ನೂ ನಿಲ್ಲಿಸಬೇಕು. ಕನ್ನಡವನ್ನು ಬಳಸಿ, ಬೆಳೆಸುವ ಕಾಯಕವಾಗಬೇಕು, ರಾಜ್ಯದಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಕನ್ನಡ ನಾಡು-ನುಡಿ ಕಟ್ಟಲು, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.

ಡಾ.ಎನ್.ಶಶಿಶೇಖರ್ ದೀಕ್ಷಿತ್, ಗಜಾನನ ಈಶ್ವರ ಹೆಗಡೆ, ವಾಣಿ ಸುಬ್ಬಂ್ಯು, ಬೆಳವಾಡಿ ಅಶ್ವತ್ಥನಾರಾಂುಣ, ಡಾ.ಎಸ್.ಸುಧಾ, ಕೆ.ಬಿ.ಲಿಂಗರಾಜು, ಡಾ.ಅಕ್ಕಿ ಸುಜಾತ, ಡಾ.ಎನ್.ಎಸ್.ರಂಗರಾಜು, ಸುಮತಿ ಸುಬ್ರಹ್ಮಣ್ಯ, ಎನ್.ಎಸ್.ಗೋಪಿನಾಥ್, ಅನ್ನಪೂರ್ಣ ನಾಗೇಂದ್ರ, ಜಿ.ಸುಬ್ಬನರಸಿಂಹ, ಎಂ.ಎಸ್.ಕೌಶಲ್ಯಾ, ಕೃ.ಪಾ.ಮಂಜುನಾಥ್, ಆರ್.ಕೃಷ್ಣ, ಹೇಮಲತಾ ಕುವಾರಸ್ವಾಮಿ, ಡಾ.ಎಸ್.ರವಿಶಂಕರ್, ಡಾ.ಕಾವೇರಿ ಪ್ರಕಾಶ್, ಆನಂದ್, ಪುಷ್ಪಲತಾ ನಾರಾಯಣ್, ವೈ.ಕೆ.ಮಂಜುನಾಥ್, ಸುಧಾ ಮುರಳಿ, ಎಸ್.ರವಿನಂದನ್, ಆರ್.ವಾಸುದೇವ್, ಎಸ್.ಯೋಗೀಶ್ ಉಪ್ಪಾರ, ಮಿಲ್ ನಾಗರಾಜು, ಎಂ.ಡಿ.ನಾಗೇಂದ್ರ, ಶೇಕ್ ಮಕ್ಸೂದುಲ್ ಹುಸೇನ್ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ವಾಡಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ವಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ನಗರಾಧ್ಯಕ್ಷ ಕೆ.ಎಸ್.ಶಿವರಾಮ್, ಪದಾಧಿಕಾರಿಗಳಾದ ಮ.ನ.ಲತಾ ಮೋಹನ್, ಅನಂತು, ಕೆ.ಕೆಂಪಣ್ಣ, ಮೈ.ನಾ.ಲೋಕೇಶ್, ಜಿ.ಪ್ರಕಾಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net