ಅನ್ಯ ಧರ್ಮಿಯರ ಬಳಿ ವ್ಯಾಪಾರ ಬೇಡ

2503KLB02
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಹಿಳೆಯರಿಗೆ ಬಳೆ, ಕುಂಕುಮ, ಫಲ ತಾಂಬೂಲ ನೀಡಿ ಅನ್ಯ ಧರ್ಮದವರೊಂದಿಗೆ ವ್ಯವಹಾರ ಮಾಡದಂತೆ ಶುಕ್ರವಾರ ಜಾಗೃತಿ ಮೂಡಿಸಲಾಯಿತು.
Published on

ಕಲಬುರಗಿ: ಹಿಂದು ಧರ್ಮ ವಿರೋಧಿಗಳೊಂದಿಗೆ, ಅನ್ಯ ಧರ್ಮದವರೊಂದಿಗೆ ಯಾವ ಕಾರಣಕ್ಕೂ ವ್ಯಾಪಾರ, ವಹಿವಾಟು ಮಾಡಬಾರದು ಎಂದು ಎದ್ದಿರುವ ವಿವಾದದ ಕೂಗು ಇದೀಗ ಕಲಬುರಗಿ ಜಿಲ್ಲೆಗೂ ವ್ಯಾಪಿಸಿದೆ.

ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಪರಿಸರದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ಹಿಂದುಪರ ಮಹಿಳಾ ಸಂಘಟನೆ ಪ್ರಮುಖರು ಮಹಿಳೆಯರಿಗೆ ಅರಿಶಿನ, ಕುಂಕುಮ, ಹೂವು, ಬಳೆ, ಬಾಳೆ ಹಣ್ಣು, ಅಡಿಕೆ ಸೇರಿದಂತೆ ತಾಂಬೂಲ ನೀಡಿ, ಈ ಕುರಿತು ಜಾಗೃತಿ ಮೂಡಿಸಿದರು.

ಈ ವೇಳೆ ಮಾತನಾಡಿದ ಪ್ರಮುಖರಾದ ದಿವ್ಯಾ ಹಾಗರಗಿ, ನಮ್ಮ ವ್ಯವಹಾರದಿಂದ ಹಣ ಗಳಿಸಿದ್ದು ದುಷ್ಟ ಕೆಲಸಕ್ಕೆ ಹೋಗಬಾರದು. ಹೀಗಾಗಿ ಪ್ರತಿಯೊಬ್ಬರೂ ಇಂದು ಎಚ್ಚರದಿಂದ ವ್ಯವಹಾರ ಮಾಡಬೇಕು. ನಮ್ಮ ಧರ್ಮದ ವಿರೋಧಿಗಳೊಂದಿಗೆ ವ್ಯವಹರಿಸದೆ ಧರ್ಮ ರಕ್ಷಣೆಯ ಕಾರ್ಯಕ್ಕೆ ಕೈಜೋಡಿಸಬೇಕು. ಶೇ.80ರಷ್ಟು ಮಹಿಳೆಯರೇ ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ. ಮಹಿಳೆಯರು ಇದೀಗ ಎಚ್ಚೆತ್ತುಕೊಂಡು ಪರಿಸ್ಥಿತಿ ಅರಿತು ಹೆಜ್ಜೆ ಇಡಬೇಕು ಎಂದು ಕೋರಿದರು.

ತಾಂಬೂಲ ಪಡೆದವರು ತಮ್ಮ ಮನೆಯ ಮಕ್ಕಳು, ಪುರುಷರು ಮತ್ತು ಬಡಾವಣೆ ಹಿಂದುಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು. ಭಾಗೀರಥಿ ಗುನ್ನಾಪುರ, ಶ್ವೇತಾ ಸಿಂಗ್, ಸಂಗೀತಾ, ರೇವತಿ, ಜ್ಯೋತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net