ಚಿಕ್ಕಮಗಳೂರು: ರಾಜ್ಯ ಸರ್ಕಾರ ತನ್ನ ಮಾತಿನಂತೆ ಅನ್ನ ಬಾಗ್ಯ ಯೋಜನೆಯಡಿ ಫೆಬ್ರವರಿ ಮತ್ತು ಮಾರ್ಚ್ನಿಂದ ಹಣದ ಬದಲಾಗಿ ೫ ಕೆಜಿ ಹೆಚ್ಚುವರಿ ಅಕ್ಕಿಯನ್ನು ನೀಡಲು ಮುಂದಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಶಿವನಾಂದ ಸ್ವಾಮಿ ತಿಳಿಸಿದರು.
ಚಿಕ್ಕಮಗಳೂರು ಉಪವಿಭಾಗದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತಾಂತ್ರಿಕ ಕಾರಣದಿಂದ ಒಂದು ವರ್ಷದಿಂದ ೫ ಕೆಜಿ ಅಕ್ಕಿಯ ಬದಲು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಹಿಸಲಾಗುತಿತ್ತು. ಆದರೆ ಕಳೆದ ೨ ತಿಂಗಳಿAದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಒಡಂಬಡಿಕೆಯಲ್ಲಿ ಅಕ್ಕಿ ದಾಸ್ತಾನು ಸಿಗುತ್ತಿರುವ ಕಾರಣದಿಂದ ಫೆಬ್ರವರಿ ತಿಂಗಳಿAದ ಹಣದ ಬದಲು ಅಕ್ಕಿಯನ್ನು ನೀಡಲು ಕ್ರಮಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ೨ ಲಕ್ಷ ೪೦ ಸಾವಿರ ಬಿಪಿಎಲ್ ಕಾರ್ಡುಗಳಿದ್ದು, ಈ ಕಾರ್ಡ್ಗಳಲ್ಲಿನ ಒಟ್ಟು ಫಲಾನುಭವಿಗಳು ೭ ಲಕ್ಷ ೭೪ ಸಾವಿರದ ೪೧೮ ಬಿಪಿಎಲ್ ಕಾರ್ಡ್ ಫಲಾನುಭವಿಗಳು ಹಾಗೂ ಅಂತ್ಯೋದಯ ಅರವತ್ತೆಂಟು ಸಾವಿರದ ಮೂನ್ನೂರ ನಾಲ್ವತೊಂಭತ್ತು ಫಲಾನುಭವಿಗಳಿಗೆ ೫ ಕೆಜಿ ಅಕ್ಕಿಯನ್ನು ನೀಡಲಾಗುತಿದೆ. ಉಳಿದ ಪಡಿತದಾರರಿಗೆ ರೂ. ೧೭೫ ಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಿAದ ಹಣದ ಬದಲು ಪ್ರತಿ ಒಬ್ಬರಿಗೆ ೧೫ ಕೆ.ಜಿ ಅಕ್ಕಿಯನ್ನು ಕೊಡಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಸರಬರಾಜು ಮತ್ತು ದಾಸ್ತಾನು ಕೊರತೆ ಕಂಡುಬರುವುದಿಲ್ಲ. ನ್ಯಾಯ ಬೆಲೆ ಅಂಗಡಿಯವರು ಇಂತಹ ಕಾರಣ ನೀಡಿದರೆ ಜನರು ನಂಬಬಾರದು ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆದ ಫಲಾನುಭವಿಗಳು ಅಕ್ಕಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತಿಲ್ಲ. ಇಂತಹ ಘಟನೆಗಳು ಕಂಡುಬAದಲ್ಲಿ ಅಂಥÀವರ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಚಿಕ್ಕಮಗಳೂರು ಉಪವಿಭಾಗದ ಉಪವಿಭಾಗಾಧಿಕಾರಿ ರಶ್ಮಿ ಹಾಗೂ ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರು ಹಾಜರಿದ್ದರು.