ಅನ್ನದಾತರ ಬೆನ್ನಿಗೆ ಮೋದಿ ಸರ್ಕಾರ

Bhagavant Khuba
Published on

ಬೀದರ್: ದೇಶದ ಅನ್ನದಾತರ ಬೆನ್ನಿಗೆ ನರೇಂದ್ರ ಮೋದಿ ಸರ್ಕಾರ ಸದಾಕಾಲ ನಿಂತಿದ್ದು, ಮತ್ತೊಮ್ಮೆ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದೆ. ರೈತರ ಮೊಗದಲ್ಲಿ ಮಂದಹಾಸ ತರಿಸಿದ ಕೇಂದ್ರ ಸರ್ಕಾರ ದೇಶದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ನಮ್ಮ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ತೊಗರಿ ಬೆಳೆಗೆ 7000 ರೂ. (400 ರೂ. ಹೆಚ್ಚಳ), ಹೆಸರು 8558 ರೂ. (803 ರೂ. ಹೆಚ್ಚಳ), ಉದ್ದಿನ ಬೇಳೆಗೆ 6950 ರೂ. (350 ಹೆಚ್ಚಳ), ಸೂರ್ಯಕಾಂತಿ 6760 ರೂ. (360 ರೂ. ಅಧಿಕ), ಸೋಯಾಬೀನ್ ಹಳದಿ 4600 ರೂ. (300), ಜೊಳ ಹೈಬ್ರಿಡ್ 3180 ರೂ. (210 ರೂ.) ಜೋಳ- ಮಾಲ್ದಂಡಿ 3225 ರೂ. (235 ರೂ. ಹೆಚ್ಚಳ) ಇತ್ಯಾದಿ ಬೇಳೆಗಳಿಗೆ ಕನಿಷ್ಠ ಬೆಂಬಲ ಹೆಚ್ಚಳ ಮಾಡಿದೆ. ಕನಿಷ್ಠ ಬೆಂಬಲ ಬೆಲೆ ಘೋಷಿಸಿ ರೈತರ ಆದಾಯ ವೃದ್ಧಿಗೆ ಸರ್ಕಾರ ಕೈಗೊಂಡಿರುವ ಕ್ರಮ ಶ್ಲಾಘನೀಯ ಎಂದು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಸುಮಾರು 2 ಲಕ್ಷ ರೈತರಿಗೆ ಸಹಾಯವಾಗಲಿದೆ. ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದೆ. ಎಲ್ಲ ರೈತರು ಕನಿಷ್ಠ ಬೆಂಬಲ ಬೆಲೆಯ ಸದುಪಯೋಗ ಪಡೆದುಕೊಳ್ಳಬೇಕು. ಸಮಸ್ತ ರೈತರ ಪರವಾಗಿ ಪ್ರಧಾನಿ ನರೇಂದ್ರ ಮೋದೀಜಿ ಹಾಗೂ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಅವರಿಗೆ ಖೂಬಾ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net