

ಚಿತ್ರದುರ್ಗ: ನಗರದ ಶ್ರೀ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಾಲಯದಲ್ಲಿ ಪ್ರತಿ ತಿಂಗಳ ಮೊದಲ ಮಂಗಳವಾರ ಅನ್ನಸಂತರ್ಪಣೆ ಕಾರ‌್ಯಕ್ಕೆ ನಿಜ ಶ್ರಾವಣ ಮಾಸದ ಮೊದಲ ಮಂಗಳವಾರ ಚಾಲನೆ ದೊರೆಯಿತು.
ಈ ಕಾರ‌್ಯಕ್ರಮದ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಾಮಂಗಳಾರತಿ ನೆರವೇರಿಸಿದ ಬಳಿಕ ಮಧ್ಯಾಹ್ನ ಅನ್ನಸಂತ ರ್ಪಣೆ ಆರಂಭಗೊಂಡಿತು. ದೇವಾಲಯದಲ್ಲಿ ಈವರೆಗೆ ಮಕರ ಸಂಕ್ರಾಂತಿ,ಮೇನಲ್ಲಿ ನಡೆಯುವ ಜಾತ್ರಾ ಮೊದಲಾದ ವಿಶೇಷ ದಿನಗಳಲ್ಲಿ ಅನ್ನಸಂರ್ಪಣೆ ವ್ಯವಸ್ಥೆ ಇತ್ತು. ಇನ್ನು ಪ್ರತಿ ತಿಂಗಳು ನಡೆಯಲಿರುವ ಈ ಕಾರ‌್ಯಕ್ಕೆ ಭಕ್ತರು ಹೆಚ್ಚಿನ ಸಹಕಾರ ನೀಡಬೇಕೆಂದು ಪ್ರಧಾನ ಅರ್ಚಕ ರಮೇಶ್ ಪೂಜಾರ್ ಮನವಿ ಮಾಡಿದ್ದಾರೆ.
(ಸಿಟಿಡಿ 22 ರಾಜ ಉತ್ಸಾವಂಬ ಉಚ್ಚಂಗಿ ಯಲ್ಲಮ್ಮ)