ಅನ್ನ ಭಾಗ್ಯ ಅಕ್ಕಿ ಚೀಲಗಳು ಚರಂಡಿ ರಸ್ತೆ ಮೇಲೆ ಪತ್ತೆ!!

pixlr
Published on

ಬಾಗಲಕೋಟೆ: ಸರ್ಕಾರ ಬಡವರ ಕಲ್ಯಾಣಕ್ಕಾಗಿ ಅನ್ನ ಭಾಗ್ಯ ಯೋಜನೆಯಡಿ ವಿತರಿಸಬೇಕಿದ್ದ ಅಕ್ಕಿ ಚರಂಡಿ ರಸ್ತೆಯ ಮೇಲೆ ಬಿದ್ದಿವೆ.

ಈ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಜೋಳದ ಬಜಾರ್ ನಲ್ಲಿ ನಡೆದಿದ್ದು ಅನ್ನ ಭಾಗ್ಯ ಯೋಜನೆಯ 13 ಅಕ್ಕಿ ಮೂಟೆಗಳು ಪತ್ತೆಯಾಗಿದೆ.
ಯಾರೋ ಖದೀಮರು ಅನ್ನಭಾಗ್ಯ ಅಕ್ಕಿ ಕಳ್ಳ ಸಾಗಾಣಿಕೆಗೆ ಯತ್ನಿಸಿ, ರಸ್ತೆಯಲ್ಲಿಯೇ ಬಿಟ್ಟು ಓಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಭಾಗಶಃ ಅಕ್ರಮ ಮಾರಾಟಕ್ಕಾಗಿ ಮೂಲ ಚೀಲ ಬೇರ್ಪಡಿಸುವ ಯತ್ನದಲ್ಲಿದ್ದಾಗ, ಯಾವುದೋ ಕಾರಣಕ್ಕೆ ಅರ್ಧದಲ್ಲೇ ಬಿಟ್ಟು ಓಡಿ ಹೋಗಿರುವ ಸಾಧ್ಯತೆ ಕಂಡು ಬಂದಿದೆ.
ಅಕ್ಕಿ ಸಾಗಿಸುವಾಗ ಚರಂಡಿಯಲ್ಲಿಯೂ ಅಕ್ಕಿ ಬಿದ್ದಿದೆ.
ಸ್ಥಳಕ್ಕೆ ಜಮಖಂಡಿ ಆಹಾರ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net