ಅನ್ನ ನೀರು ಸುಭಾಷಿತ ಶ್ರೇಷ್ಠ ರತ್ನಗಳು

Gavimutt
Published on

ಬಸವಕಲ್ಯಾಣ: ಅನ್ನ, ನೀರು, ಶುಭಾಷಿತ ಎಂಬ ಮೂರು ಶ್ರೇಷ್ಠ ರತ್ನಗಳು ಎಂದು ಜಗದ ಪ್ರಥಮ ಜಗದ್ಗುರು ಶ್ರೀ ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಮೂಲಕ ಮನುಕುಲಕ್ಕೆ ಬೋಧಿಸಿದ್ದಾರೆ ಎಂದು ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.
ಶ್ರಾವಣ ಮಾಸದ ನಿಮಿತ್ತ ಸೋಮವಾರ ಸಂಜೆ ನಗರದ ಇತಿಹಾಸ ಪ್ರಸಿದ್ಧ ಗವಿಮಠದಲ್ಲಿ ಗವಿಮಠ ಟ್ರಸ್ಟ್ ಹಾಗೂ ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಧರ್ಮ ಗ್ರಂಥ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ಎರಡನೇ ವಿಶೇಷ ಉಪನ್ಯಾಸ ಮಾಲೆಯಲ್ಲಿ ಮಾತನಾಡಿದರು.
ಯುವ ಮುಖಂಡ ಶಿವಕುಮಾರ ಬಿರಾದಾರ ಮಾತನಾಡಿ, ಗುರುವಿನ ಮಾರ್ಗದರ್ಶನದಲ್ಲಿ ಸನ್ಮಾರ್ಗದಲ್ಲಿ ಮುನ್ನಡೆಯುವುದೇ ನಿಜ ಧರ್ಮ ಎಂದರು.
ವೈದ್ಯಾಧಿಕಾರಿ ಡಾ.ಬಾಲಕೃಷ್ಣ ರಾಠೋಡ ಮಾತನಾಡಿ, ಆಹಾರ ಸೇವನೆ ವಿಧಾನ ಗೊತ್ತಿಲ್ಲದೇ ಬಹಳಷ್ಟು ಜನರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ನಿಯಮಿತ, ಹಿತ ಆಹಾರ ಸೇವಿಸಬೇಕು ಎಂದರು.
ಸAಸ್ಥೆ ತಾಲೂಕು ಅಧ್ಯಕ್ಷ ಬಸವಂತಪ್ಪ ಲವಾರೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮಲ್ಲಿಕಾರ್ಜುನ ಅಲಶೆಟ್ಟೆ, ಶರಣಪ್ಪ ಬಿರಾದಾರ, ಎ.ಜಿ.ಪಾಟೀಲ್, ಶಾಂತಲಿAಗ ಮಠಪತಿ, ಮಲ್ಲಿಕಾರ್ಜುನ ಅಲಗುಡೆ, ಶಿವಕುಮಾರ ಪರ್ತಾಪುರೆ, ಮಹಾನಂದಾ, ಶಕುಂತಲಾ, ಕಲಾವತಿ ಮಠಪತಿ, ಸವಿತಾ ಸ್ವಾಮಿ, ಪೂರ್ಣಿಮಾ ರುದ್ರೇಶ, ಸುಭದ್ರಾಬಾಯಿ, ಪಾರ್ವತಿ ರೋಜೆ, ಸತ್ಯವತಿ ಸ್ವಾಮಿ ಇತರರಿದ್ದರು.
ಮಹಿಳೆಯರು ಸಾಮೂಹಿಕವಾಗಿ ಭೂಲಾಯಿ ಪದಗಳನ್ನು ಹಾಡಿದರು. ರಮೇಶ ರಾಜೋಳೆ ಸ್ವಾಗತಿಸಿದರು. ಪ್ರೊ.ರುದ್ರೇಶ್ವರ ಸ್ವಾಮಿ ಗೋರ್ಟಾ ನಿರೂಪಣೆ ಮಾಡಿದರು. ಮಲ್ಲಯ್ಯ ಧನ್ನೂರ ಪ್ರಾರ್ಥನಾ ಗೀತೆ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net