

ದೋರನಹಳ್ಳಿ: ಒಂದು ಕಾಲದಲ್ಲಿ ಜನರ ಆರೋಗ್ಯ ಕಾಪಾಡಿ ಚಿಕಿತ್ಸೆ ನೀಡಿದ ಗ್ರಾಮದ ಹೃದಯ ಭಾಗದಲ್ಲಿರುವ ಹಳೇ ಪ್ರಾಥಮಿಕ ಆರೋಗ್ಯ ಕೇಂದ್ರ ಈಗ ಅನೈತಿಕ ಮತ್ತು ರೋಗ ರುಜಿನ ಹರಡುವ ತಾಣವಾಗಿ ಮಾರ್ಪಟ್ಟಿದೆ.
ಈ ಪಿಎಚ್‌ಸಿ ಕೇಂದ್ರ 2013ರಲ್ಲಿ ಹೊಸ ಕಟ್ಟಡಕ್ಕೆ ವರ್ಗಾವಣೆಯಾದ ನಂತರ ಅಧಿಕಾರಿಗಳ ನಿರ್ಲಕ್ಷÈದಿಂದಾಗಿ ಇಂದು ಮಲ-ಮೂತ್ರ, ತ್ಯಾಜ್ಯ ವಸ್ತುಗಳ ತಾಣ, ಮಧ್ಯಪಾನ ಮಾಡುವ ಸ್ಥಳವಾಗಿ ಇಷ್ಟೇ ಇಲ್ಲದೆ ರಾತ್ರಿಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಗೆ ಹೇಳಿ ಮಾಡಿಸಿದಂತಾಗಿದೆ.
ಈ ಕಟ್ಟಡದ ಕಂಪೌAಡ್‌ಗೆ ಹೊಂದಿಕೊAಡು ವಿವಿಧ ರೀತಿಯ ತಿನಿಸುಗಳು ಮಾರುವ ಕೈ ಬಂಡಿದಗಳಿವೆ. ಮಹರ್ಷಿ ವಾಲ್ಮೀಕಿ ಕಟ್ಟೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು ನಿಲ್ಲುವ ಗ್ರಾಮದ ಸಾರ್ವಜನಿಕ ಸ್ಥಳವಾಗಿದ್ದರೂ ಈ ಕಟ್ಟಡ ಬಳಕೆಯಿಲ್ಲದ ಕಾರಣ ತ್ಯಾಜ್ಯ ವಸ್ತುಗಳು ತಂದು ಹಾಕುವುದಲ್ಲದೆ ಆ ತ್ಯಾಜ್ಯದಲ್ಲಿ ಹಂದಿಕಗಳ ಕಾಟ ಶುರುವಾಗಿದೆ.
ಗ್ರಾಮದಲ್ಲಿ ಸಾಕಷ್ಟು ಕಿರಾಣಿ, ಪಾನ್‌ಶಾಪ್, ಕೈ ಬಂಡಿಗಳು, ಹೂವಿನ, ಔಷಧ, ಬಟ್ಟೆ ಅಂಗಡಿ, ತೆಂಗಿನಕಾಯಿ ವ್ಯಾಪಾರಿಗಳು ಇದ್ದಾರೆ. ವ್ಯಾಪಾರ ಅಂದ ಮೇಲೆ ಸಹಜವಾಗಿ ಸಾಕಷ್ಟು ಅನುಪಯುಕ್ತ ವಸ್ತುಗಳು ಎಸೆಯುವುದು ಸರ್ವೇ ಸಾಮಾನ್ಯ. ಈಗ ಆ ಎಲ್ಲ ತ್ಯಾಜ್ಯ ಅನುಪಯುಕ್ತ ವಸ್ತುಗಳನ್ನು ಎಸೆಯಲು ಈ ಹಳೇ ಪಿಎಚ್‌ಸಿ ಕಟ್ಟಡ ಬಳಕೆ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ದುರಂತ.
ಇದೇ ಸ್ಥಳದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆರೋಗ್ಯ ಮತ್ತು ಕ್ಷೇಮ ಕೇಂದ್ರ ನಿರ್ಮಿಸಲಾಗಿದ್ದು, ಆ ಕೇಂದ್ರದ ಮುಂದೇಯೂ ಹೀಗೆ ದುರ್ನಾತ ಬೀರುವ ಕಾರಣ ಅಲ್ಲಿಗೂ ಜನ ಬರುವುದು ವಿರಳವಾಗಿದೆ. ಆರೋಗ್ಯ ಇಲಾಖೆಯ ದಿವ್ಯ ನಿರ್ಲಕ್ಷö್ಯದಿಂದ ಈ ಸಮಸ್ಯೆ ದಿನೇ ದಿನೆ ಹೆಚ್ಚುತ್ತಿದೆ. ಸಂಬAಧಿಸಿದ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ.