ಅನೇಕರಿಗೆ ಶ್ವಾನ ಎಂದರೇ ಹೆಚ್ಚು ಪ್ರೀತಿ: ಪ್ರೀತಂ ಗೌಡ

ಅನೇಕರಿಗೆ ಶ್ವಾನ ಎಂದರೇ ಹೆಚ್ಚು ಪ್ರೀತಿ: ಪ್ರೀತಂ ಗೌಡ
Published on

ಹಾಸನ: ನಗರದ ಸಾಲಗಾಮೆ ರಸ್ತೆ, ಕಲಾ ಕಾಲೇಜು ಮೈದಾನದಲ್ಲಿ ಲಯನ್ ಕೆನಾಲ್ ಕ್ಲಬ್ ವತಿಯಿಂದ ಭಾನುವಾರ ನಡೆದ 2022-23ನೇ ಸಾಲಿನ ರಾಜ್ಯ ಮಟ್ಟದ ಶ್ವಾನ ಪ್ರದರ್ಶನ ಮತ್ತು ಸ್ಪರ್ಧೆ ಹಾಗೂ ಡಾಗ್ ಫ್ಯಾಶನ್ ಶೋ ಕಾರ್ಯಕ್ರಮಕ್ಕೆ ಶಾಸಕ ಪ್ರೀತಂ ಜೆ. ಗೌಡ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಅನೇಕರಿಗೆ ಶ್ವಾನ ಎಂದರೇ ಹೆಚ್ಚು ಪ್ರೀತಿ. ಕುಟುಂಬದ ಸದಸ್ಯರಿಗಿಂತ ಹೆಚ್ಚಾಗಿಅವುಗಳನ್ನು ಪ್ರತೀತಿಸುತ್ತಾರೆ. ಶ್ವಾನಗಳ ಪ್ರೀತಿಗೆ ಇಡೀ ಕುಟುಂಬ ಅವುಗಳ ಪೋಷಣೆಯನ್ನು ಅತ್ಯಂತ ಪ್ರೀತಿಯಿಂದ ಮಾಡಿರುತ್ತಾರೆ ಎಂದರು.

ರಾಜ್ಯದಲ್ಲಿ ಪ್ರಥಮ ಬಾರಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, 11 ತಿಂಗಳ ಬೆಸ್ಟ್ ಇನ್ ಡಾಗ್ ಶೋನಲ್ಲಿ ಮೊದಲ ಬಹುಮಾನವಾಗಿ 20 ಸಾವಿರ, 2ನೇ ಬಹುಮಾನವಾಗಿ 15 ಸಾವಿರ, 3ನೇ ಬಹುಮಾನ 10 ಸಾವಿರ, 4ನೇ ಬಹುಮಾನವಾಗಿ 5 ಸಾವಿರ ಸೇರಿದಂತೆ ಒಟ್ಟು 10 ಬಹುಮಾನಗಳ ವಿತರಿಸಲಾಯಿತು.

9 ರಿಂದ 10 ತಿಂಗಳ ಈ ಡಾಗ್ ಶೋನಲ್ಲಿ ಬೆಸ್ಟ್ ಇನ್ ಪಪ್ಪಿಗೆ ಒಟ್ಟು 5 ಬಹುಮಾನವನ್ನು ಕೊಡಲಾಯಿತು. ಎಲ್ಲಾ ಜಾತಿಯ ನಾಯಿಗಳಿಂದ ಮೂರು ಬಹುಮಾನ ಕೊಡಲಾಯಿತು.. ದೇಶಿ ಶ್ವಾನ ಮುಧೂಳ್ ಗೆ ಒಟ್ಟು ನಾಲ್ಕು ಬಹುಮಾನವನ್ನು ಕ್ಷೇತ್ರದ ಶಾಸಕ ಪ್ರೀತಂ ಗೌಡರ ಕೈಲಿ ಕೊಡಿಸಿದರು. ಭಾಗವಹಿಸಿದ್ದ ನೂರಾರು ಜನರು ತಮ್ಮ ತಮ್ಮ ಶ್ವಾನವನ್ನು ಇದೆ ವೇಳೆ ಪ್ರದರ್ಶಿಸಿ ಗಮನಸೆಳೆದರು.

ರ್ಯಕ್ರಮದಲ್ಲಿ ಹುಡಾ ಅಧ್ಯಕ್ಷ ಲಲಾಟ್ ಮೂರ್ತಿ, ಲಯನ್ ಕೆನಾಲ್ ಕ್ಲಬ್ ಹಾಸನ ಅಧ್ಯಕ್ಷ ವರದ ಪ್ರಸಾದ್, ಉಪಾಧ್ಯಕ್ಷ ಸಚೀನ್, ಖಜಾಂಚಿ ಚಂದನ್, ಕಾರ್ಯದರ್ಶಿ ಪ್ರಮೋದ್, ಖಜಾಂಚಿ ದರ್ಶನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net