ಅನೇಕರ ತ್ಯಾಗ, ಬಲಿದಾನದಿಂದ ದೊರೆತಿದೆ ಸ್ವಾತಂತ್ರ್ಯ

26
Published on

ಮೈಸೂರು: ಅನೇಕ ಜನರ ತ್ಯಾಗ-ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಕಾಳಚನ್ನೇಗೌಡ ಹೇಳಿದರು.


ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.


ಅನೇಕ ಹೋರಾಟಗಾರರು ಮನೆಗಳನ್ನು ತೊರೆದು ಚಳವಳಿಗೆ ಧುಮಿಕಿದರು. ಬ್ರಿಟಿಷರು ನೀಡಿದ ಹಿಂಸೆ-ತೊಂದರೆ ಅನುಭವಿಸಿದರೂ ಎದೆಗುಂದದೆ ಹೋರಾಡಿದರು. ಗಾಂಧೀಜಿ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ತೀರ್ಥಯಾತ್ರೆಯ ಸ್ವರೂಪದಲ್ಲಿ ಪಡೆಯಿತು. ಕರ ನಿರಾಕರಣೆ, ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳವಳಿಗಳಂತಹ ಹೋರಾಟಗಳಿಂದ ಬ್ರಿಟಿಷರನ್ನು ಹಿಮ್ಮೆಟ್ಟಸಲು ಸಾಧ್ಯವಾಯಿತು ಎಂದು ಸ್ಮರಿಸಿದರು.


ಮೈಸೂರು ವಿಶ್ವವಿದ್ಯಾಲಯದ ಗ್ರಂಥಾಲಯದ ನಿವೃತ್ತ ಗ್ರಂಥಪಾಲಕ ಡಾ.ಸಿ.ಪಿ.ರಾಮಶೇಷ್ ಮಾತನಾಡಿ, ಸ್ವಾತಂತ್ರೃ ನಂತರ ದೇಶ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಅಂದು ಕೇವಲ 4 ವಿಶ್ವವಿದ್ಯಾಲಯಗಳು ಭಾರತದಲ್ಲಿದ್ದವು. ಇಂದು ಸಾವಿರಾರು ವಿಶ್ವವಿದ್ಯಾಲಯಗಳು ಭಾರತದಲ್ಲಿ ಸ್ಥಾಪನೆಯಾಗಿವೆ. ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ, ಕೃಷಿ, ನೀರಾವರಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ.


ರಕ್ಷಣೆ, ಬಾಹ್ಯಾಕಾಶ, ಐಟಿ-ಬಿಟಿಗಳಲ್ಲೂ ಅಸಾಮಾನ್ಯ ಸಾಧನೆ ಮಾಡಿದ್ದರೂ ಭಾರತವನ್ನು ಜನಸಂಖ್ಯೆ ಹೆಚ್ಚಳ, ಲಂಚಗುಳಿತನದಂತಹ ಅನೇಕ ಸಮಸ್ಯೆಗಳು ಬಾಧಿಸುತ್ತಿವೆ ಎಂದರು.


ಕಿರಿಯಶ್ರೀಗಳಾದ ಜಯರಾಜೇಂದ್ರ, ಹುಲಿಯೂರುದುರ್ಗದ ಶ್ರೀಗಳು, ಎಸ್.ಶಿವಕುಮಾರಸ್ವಾಮಿ ಇನ್ನಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net