ಅನೆಗೊಳದಲ್ಲಿ ಲಕ್ಷ್ಮೀದೇವಿ ಕರಗ

31.kkr.,6 (1)
ಆನೆಗೊಳ ಗ್ರಾಮದಲ್ಲಿ ಹೊಂಬಾಳೆ ಕರಗ ಹೊತ್ತ ಬಾಲಕಿ ಮೆರವಣಿಗೆಯಲ್ಲಿ ಸಾಗುತ್ತಿರುವುದು.
Published on

ಕಿಕ್ಕೇರಿ: ಹೋಬಳಿಯ ಆನೆಗೊಳ ಗ್ರಾಮದಲ್ಲಿ ಲಕ್ಷ್ಮೀದೇವಿ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಮಹೋತ್ಸವದ ಹಿನ್ನೆಲೆಯಲ್ಲಿ ಮನೆ ಆವರಣವನ್ನು ಶುಚಿಗೊಳಿಸಿ, ರಂಗವಲ್ಲಿ ಬಿಡಿಸಿ ತಳಿರು ತೋರಣ ಕಟ್ಟಲಾಗಿತ್ತು. ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಗಿತ್ತು. ದೇವಿ ಗುಡಿಯ ಬಳಿ ವಿವಿಧ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ, ದೇವಿಯ ಪಠಣೆ, ವಾದ್ಯ ಮೇಳ ಗಮನ ಸೆಳೆಯಿತು

ಅರ್ಚಕ ವಂಶದ ಬಾಲಕಿಗೆ ಹೊಂಬಾಳೆ ಕರಗವನ್ನು ಹೊರಿಸಿ ದೇವಿ ಅವಾಹನೆ ಮಾಡಿದರು. ಬಾಲಕಿ ವಾದ್ಯಮೇಳದೊಂದಿಗೆ ಪ್ರಮುಖ ರಸ್ತೆಯಲ್ಲಿ ಸಾಗಿದಳು. ಭಕ್ತರು ದೇವಿಯ ಹಿಂಬಾಲಿಸಿ ಜಯಘೋಷ ಮಾಡಿದರು.

31ಕೆಕೆಆರ್6
ಆನೆಗೊಳ ಗ್ರಾಮದಲ್ಲಿ ಹೊಂಬಾಳೆ ಕರಗ ಹೊತ್ತ ಬಾಲಕಿ ಮೆರವಣಿಗೆಯಲ್ಲಿ ಸಾಗುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net